ಲವ್‌ಗೂ ಸೈ ಮಾಸ್‌ಗೂ ಸೈ ಎಂದೆನಿಸಿಕೊಂಡಿರುವ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಆರ್ ಜಿವಿಗೆ ತಡೆ; ಹೈದರಾಬಾದ್ ಗೆ ವಾಪಸ್ಸಾಗಲು ಸೂಚನೆ

ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್‌ ಶಂಕರ್’ ಸಿನಿಮಾ ಸಕ್ಸಸ್ ಆಗಿದ್ದು ಆರ್.ಜಿವಿ ಪಾರ್ಟಿ ಆಯೋಜಿಸಿದ್ದರು. ಆ ವೇಳೆ ಬಿಯರ್ ಹಾಗೂ ಶಾಂಪೇನ್‌ನೊಂದಿಗೆ ಅಲ್ಲಿದ್ದವರೆಲ್ಲರೂ ಸಂಭ್ರಮಿಸುತ್ತಿದ್ದವರು. ಆಗ ಆರ್ ಜಿವಿ ನಟಿಯರಾದ ನಿಧಿ ಅಗರ್ವಾಲ್ ಮತ್ತು ನಭಾ ನಟೇಶ್ ಮೇಲೆ ಬೇಕಂತಲೇ ಬಿಯರ್ ಚೆಲ್ಲಿದ್ದಾರೆ. ಈ ಚಿತ್ರಕ್ಕೆ ರಾಮ್ ಗೋಪಾಲ್‌ ಜೊತೆ ಬಂಡವಾಳ ಹಾಕಿದ್ದ ಚಾರ್ಮಿ ಕೌರ್ ಕೂಡಾ ಜೊತೆಗಿದ್ದರು.

 

 

‘ಇಸ್ಮಾರ್ಟ್‌ ಶಂಕರ್’ ಸಿನಿಮಾ ಸಕ್ಸಸ್‌ಗೆ ವರ್ಮಾ ನಡೆಸಿದ ಪ್ರಚಾರವೂ ಒಂದು ರೀತಿಯ ಸಾಕ್ಷಿ ಎಂದರೆ ತಪ್ಪಾಗದು ನೋಡಿ. ಸಿನಿಮಾ ನೋಡಲು ಸ್ನೇಹಿತರೊಂದಿಗೆ ಬೈಕಿನಲ್ಲಿ ಮೂರು ಜನ ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದೇವೆ ಎಂದು ಫೋಟೋ ಹಾಕಿಕೊಂಡಿದ್ದರು.