ರಾಮ್ ಗೋಪಾಲ್ ವರ್ಮಾ ನಿರ್ದೇಶನದ ' ಲಕ್ಷ್ಮೀಸ್ ಎನ್‌ಟಿಆರ್ ' ಚಿತ್ರವನ್ನು ಮೇ 1 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿತ್ತು. ಆದರೆ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಬಿಡುಗಡೆಗೆ ತಡೆಯಾಚಿಸಿತ್ತು.

 

’ಲಕ್ಷ್ಮೀಸ್ ಎನ್‌ಟಿಆರ್’ ಚಿತ್ರದಲ್ಲಿ ಯಾವುದೇ ಪಕ್ಷಗಳ ಬಗ್ಗೆ ಅಥವಾ ಅಭ್ಯರ್ಥಿ ಬಗ್ಗೆ ತೋರಿಸಿರುವುದಿಲ್ಲ. ಇದು ಕೇವಲ ಎನ್‌ಟಿ ರಾಮ್‌ ರಾವ್ ಜೀವನ ಚರಿತ್ರೆಯಷ್ಟೇ ಎಂದು ಚಿತ್ರತಂಡ ಸಂಪೂರ್ಣ ಮಾಹಿತಿ ನೀಡಿ ರಿಲೀಸ್‌ಗೆ ರೆಡಿಯಾಗಿದೆ.

ಗೊತ್ತಿರುವ ಲೆಜೆಂಡ್‌ನ ಗೊತ್ತಿಲ್ಲದ ಕಥೆ ಇದು: ಯಜ್ಞಾ ಶೆಟ್ಟಿ

ಆಂಧ್ರ ಸ್ಟಾರ್ ಹೊಟೇಲ್‌ವೊಂದರಲ್ಲಿ ಪ್ರೆಸ್‌ಮೀಟ್ ಆಯೋಜಿಸಿದ ವರ್ಮರನ್ನು ಪಾಯಪುರ ಪೊಲೀಸ್ ಠಾಣೆ ಸಿಬ್ಬಂದಿ ಹೈದರಾಬಾದ್‌ಗೆ ಹಿಂತಿರುಗುವಂತೆ ಕೇಳಿಕೊಂಡಿದ್ದಾರೆ. ಆದರೆ ಪ್ರೆಸ್‌ಮೀಟ್ ನಡೆಸಲು ತಡೆದಿದ್ದಕ್ಕೆ ವರ್ಮ ಪಯಾಪುರ ರಸ್ತೆ ಮಧ್ಯದಲ್ಲಿ ಪ್ರೆಸ್‌ಮೀಟ್ ಮಾಡುವುದಾಗಿ ಕೋಪಗೊಂಡು ಟ್ಟೀಟ್ ಮಾಡಿದ್ದಾರೆ.