Asianet Suvarna News Asianet Suvarna News

ಆರ್ ಜಿವಿ ತೃತೀಯಲಿಂಗಿ ಎಂದು ಕರೆದದ್ದು ಯಾರಿಗೆ?

ಯಾವಾಗಲೂ ಏನಾದರೂ ಹೇಳಿಕೆ ನೀಡುವ ಮೂಲಕ ಸುದ್ಧಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಎಂದಿನಂತೆ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ. ಟೈಗರ್ ಶ್ರಾಫ್ ನನ್ನು ತೃತೀಯ ಲಿಂಗಿ ಎಂದು ಕರೆದು ವಿವಾದವನ್ನು ಸೃಷ್ಟಿಸಿದ್ದಾರೆ.

Ram Gopal Varma calls Tiger Shroff transgender Vidyut Jammwal makes his conversation public

ನವದೆಹಲಿ (ಏ.13): ಯಾವಾಗಲೂ ಏನಾದರೂ ಹೇಳಿಕೆ ನೀಡುವ ಮೂಲಕ ಸುದ್ಧಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಎಂದಿನಂತೆ ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ್ದಾರೆ. ಟೈಗರ್ ಶ್ರಾಫ್ ನನ್ನು ತೃತೀಯ ಲಿಂಗಿ ಎಂದು ಕರೆದು ವಿವಾದವನ್ನು ಸೃಷ್ಟಿಸಿದ್ದಾರೆ.

ಟೈಗರ್ ಶ್ರಾಫ್ ಹಾಗೂ ನಟ ವಿದ್ಯುತ್ ಜಮ್ಮವಾಲ್ ನಡುವೆ ಹೋಲಿಕೆ ಮಾಡಿ ಟೈಗರ್ ಶ್ರಾಫ್ ಗೆ ಅವನೊಬ್ಬ ತೃತೀಯ ಲಿಂಗಿ ಹೇಳಿದ್ದಾರೆ.  ಜಮ್ಮವಾಲ್ ಆರ್ ಜಿವಿಗೆ ಕರೆ ಮಾಡಿ ಯಾಕೆ ಈ ರೀತಿ ಮಾಡುತ್ತಿದ್ದೀರಿ ಎಂದು ವಿಚಾರಿಸಿದಾಗ ನಾನು ನಿನ್ನ ಬಗ್ಗೆ ಏನೂ ಹೇಳಿಲ್ಲ. ಟೈಗರ್ ಶ್ರಾಫ್ ಗೆ ತೃತೀಯ ಲಿಂಗಿ, ಹೆಣ್ಣು ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕರೆಯನ್ನು ವಿದ್ಯುತ್ ರೆಕಾರ್ಡ್ ಮಾಡಿ ಅವರ ಸೌಂಡ್ ಕ್ಲೌಡ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.

ಈ ಆಡಿಯೋದಲ್ಲಿ ವಿದ್ಯುತ್  ಆರ್ ಜಿವಿಗೆ, ನೀವು ಯಾಕೆ ನನ್ನ ಟೈಗರ್ ಶ್ರಾಪ್ ನಡುವೆ ಹೋಲಿಕೆ ಮಾಡುತ್ತಿದ್ದೀರಿ ಎಂದು ಪದೇ ಪದೇ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಆರ್ ಜಿವಿ ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.  

Follow Us:
Download App:
  • android
  • ios