ರಕ್ಷಿತ್‌ಶೆಟ್ಟಿ ಉಳಿದವರು ಕಂಡಂತೆ ಚಿತ್ರದ ಜನಪ್ರಿಯ ಪಾತ್ರ ರಿಚ್ಚಿ ಹೆಸರಿನ ಚಿತ್ರದಲ್ಲಿ ನಟಿಸುತ್ತಾರೆಂದೂ ರಿಷಭ್ ಶೆಟ್ಟಿ ಅದನ್ನು ನಿರ್ದೇಶಿಸುತ್ತಿದ್ದಾರೆಂದೂ ಸುದ್ದಿಯಾಗಿತ್ತು

ಇದೀಗ ನಿರ್ದೇಶಕರು ಬದಲಾಗಿರುವ ಸುದ್ದಿ ಬಂದಿದೆ. ಉಳಿದವರು ಕಂಡಂತೆ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಪಿಕೆ ರಾಹುಲ್ ಹೊಸ ನಿರ್ದೇಶಕರು. ರಾಹುಲ್ ಈಗಷ್ಟೇ ಉತ್ತರಾ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ. ಅದರಲ್ಲಿ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ನಟಿಸಿದ್ದಾರೆ. ಪಿಕೆ ರಾಹುಲ್ ಬಗ್ಗೆ ರಕ್ಷಿತ್‌ಗೂ ವಿಶೇಷ ಮೆಚ್ಚುಗೆ. ಚಾರ್ಲಿ ಚಿತ್ರದ ನಂತರ ಶುರುವಾಗಲಿರುವ ‘ರಿಚ್ಚಿ’ಯ ಕತೆಯನ್ನು ಬರೆದವರು ರಕ್ಷಿತ್. ರಾಹುಲ್ ಜೊತೆ ಚಂದ್ರಜಿತ್ ಸೇರಿ ಚಿತ್ರಕತೆ ಸಂಭಾಷಣೆ ಬರೆಯುತ್ತಿದ್ದಾರೆ. ಪುಷ್ಕರ್ ನಿರ್ಮಾಣದ ಈ ಸಿನಿಮಾದ ತಂತ್ರಜ್ಞರ ಹೆಸರು ಒಂಚೂರು ಬೇಗ ಘೋಷಣೆ ಆಗಿದೆ. ಯಾಕೆಂದರೆ, ಸಿನಿಮಾ ಶುರುವಾಗುವುದಕ್ಕೆ ಇನ್ನೂ ಒಂದು ವರ್ಷ ಕಾಯಬೇಕು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred