ಮಾಧ್ಯಮಗಳಲ್ಲಿ ಸುದ್ದಿಯಾಗಲೆಂದೇ ರಾಖಿ ಸಾವಂತ್ ಹೀಗೆ ಮಾಡ್ತಾರೋ ಅಥವಾ ಅವರು ನಿಜವಾಗಿಯೂ ಮಾಡೋದು ಸುದ್ದಿಯಾಗುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸುದ್ದಿಯಲ್ಲಿರೋದಂತೂ ನಿಜ. 

ಇತ್ತೀಚಿಗೆ ಎನ್ ಆರ್ ಐಯನ್ನು ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದನ್ನು ರಾಖಿ ತಳ್ಳಿ ಹಾಕಿದ್ದಾರೆ. ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಅಷ್ಟೇ. ಮದುವೆಯಾಗಿಲ್ಲ ಎಂದಿದ್ದರು. 

NRI ಮದುವೆಯಾದ ರಾಖಿ, ಹನಿಮೂನ್ ಪೋಟೋಗಳು ವೈರಲ್!

ಈಗ ಮತ್ತೆ ಹೊಸ ರಾಗ ಎಳೆದಿದ್ದಾರೆ. ಹೌದು. ನಾನು ಮದುವೆಯಾಗಿದ್ದೇನೆ. ನನಗೆ ಭಯವಾಗಿತ್ತು ಅದಕ್ಕೆ ಮಾಧ್ಯಮದೆದುರು ಹೇಳಿರಲಿಲ್ಲ. ಈಗ ಒಪ್ಪಿಕೊಳ್ಳುತ್ತಿದ್ದೇನೆ. ನನಗೆ ಮದುವೆಯಾಗಿದ್ದು ನಿಜ’ ಎಂದಿದ್ದಾರೆ. 

ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನನ್ನ ಪತಿ ಮೀಡಿಯಾ ಎಂದರೆ ನಾಚಿಕೆಪಟ್ಟುಕೊಳ್ಳುತ್ತಾರೆ. ಬೇರೆಯವರ ಎದುರು ಬರುವುದಕ್ಕೆ ಅವರು ಮುಜುಗರಪಟ್ಟುಕೊಳ್ಳುತ್ತಾರೆ. ಮದುವೆ ಕುಟುಂಬಗಳ ಮಧ್ಯೆ ನಡೆಯುವ ಖಾಸಗಿ ಸಮಾರಂಭ. ಅದನ್ನು ಪ್ರಪಂಚದೆದುರು ತೆರೆದಿಡುವ ಅಗತ್ಯವಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ. 

ಟೀಂ ಇಂಡಿಯಾ ಸೋಲಿಗೆ ಪತ್ನಿಯರೇ ಕಾರಣ; ರಾಖಿ ಸಾವಂತ್!

ಪತಿ ರಿತೇಶ್ ಬಗ್ಗೆ ಮಾತನಾಡುತ್ತಾ, ಅವರೊಬ್ಬ ಬ್ಯುಸಿನೆಸ್ ಮ್ಯಾನ್. ಒಳ್ಳೆಯ ವ್ಯಕ್ತಿ. ಅಪರೂಪದ ವ್ಯಕ್ತಿ. ರಿತೇಶ್ ನನಗೆ ಸಿಕ್ಕಿರುವುದು ಪುಣ್ಯ ಎಂದಿದ್ದಾರೆ.