ಪ್ರಕರಣದಲ್ಲಿ ಹಕ್ಕು ಸ್ವಾಮ್ಯ ಉಲ್ಲಂಘನೆಯಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.  

ಚೆನ್ನೈ(ಜೂ.1): ಸೂಪರ್‌ಸ್ಟಾರ್ ರಜನೀಕಾಂತ್ ಅವರ ಅಭಿನಯದ 'ಕಾಲ' ಚಿತ್ರಕ್ಕೆ ಈಗ ಕಾನೂನು ಸಂಕಟ ಎದುರಾಗಿದೆ. ಸಿನಿಮಾದ ಚಿತ್ರಕಥೆ ಮತ್ತು ಹೆಸರು ನನಗೆ ಸೇರಿದ್ದು ಎಂದು ಸಹಾಯಕ ನಿರ್ದೇಶಕ ರಾಜಶೇಖರ್ ಎಂಬುವವರು ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಹಕ್ಕು ಸ್ವಾಮ್ಯ ಉಲ್ಲಂಘನೆಯಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ. ಕಬಾಲಿ ಚಿತ್ರ ನಿರ್ದೇಶನ ಮಾಡಿದ್ದ ಪಿ.ರಂಜಿತ್ ಅವರು ಕಾಲ ಕರಿಕಾಲನ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ತಮಿಳುನಾಡು ಮೂಲದ ಮುಂಬೈ'ನ ಗ್ಯಾಂಗ್‌ಸ್ಟರ್ ಒಬ್ಬನಿಗೆ ಸಂಬಂಧಿಸಿದ ಕತೆಯಾಗಿದೆ.