ರೆಬೆಲ್ ಸ್ಟಾರ್ ಅಂಬರೀಶ್ ಎಲ್ಲಾ ಚಿತ್ರರಂಗದವರ ಜೊತೆಯೂ ಸ್ನೇಹದಿಂದ ಇರುತ್ತಿದ್ದರು. ಇವರ ಸ್ನೇಹಪರತೆಗೆ ಮಾರುಹೋಗದವರೇ ಇರಲಿಲ್ಲ. ಎಲ್ಲಾ ಚಿತ್ರರಂಗದ ಸ್ಟಾರ್ ನಟರೂ ಅಂಬಿ ಜತೆ ಸ್ನೇಹ ಸಂಪರ್ಕ ಇಟ್ಟುಕೊಂಡಿದ್ದಾರೆ. ಅದರಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಒಬ್ಬರು. 

ಅಂಬಿ ಮಗನ ಮೊದಲ ಚಿತ್ರ ರಿಲೀಸ್‌ಗೆ ರೆಡಿ, ಏನಿದೆ ವಿಶೇಷ?

ಅಂಬಿ ಮಗ ಅಭಿಷೇಕ್ ಸಿನಿಮಾಗೆ ಎಂಟ್ರಿ ಕೊಟ್ತಿದ್ದಾರೆ ಎಂದು ತಿಳಿದಾಗ ರಜನಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರಂತೆ! ಅಭಿಷೇಕ್ ಸಿನಿಮಾದಲ್ಲಿ ಒಂದು ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕ ನಾಗಶೇಖರ್ ಗೆ ಕೇಳಿಕೊಂಡಿದ್ದರಂತೆ! 

ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್

ಭಿಕ್ಷುಕನ ಪಾತ್ರವಾದರೂ ಸರಿ, ಅಭಿಷೇಕ್ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ರಜನಿ ಕೇಳಿದ್ದರಂತೆ. ಈ ವಿಚಾರವನ್ನು ಅಂಬಿ ಬಳಿ ನಾಗಶೇಖರ್ ಹೇಳಿದಾಗ ಕಥೆಗೆ ಅಗತ್ಯ ಎನಿಸಿದ್ರೆ, ಅವರಿಗೆ ಒಪ್ಪುವಂತಹ ಪಾತ್ರವಿದ್ದರೆ ಮಾತ್ರ ಹೇಳು. ಅವರು ಸಿಕ್ತಾರೆ ಅಂತ ಯಾವ್ಯಾವುದೋ ಪಾತ್ರ ಮಾಡಿಸಿದ್ರೆ ಅವರ ಗೌರವ ಕಡಿಮೆ ಆಗುತ್ತದೆ ಎಂದಿದ್ದರಂತೆ ರೆಬೆಲ್ ಸ್ಟಾರ್. 

ಅಮರ್ ಸಿನಿಮಾ ಇದೇ 31 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.