ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು

ಚೆನ್ನೈ(ಡಿ.3): ಭಾರತದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಸುಮಾರು 8 ಗಂಟೆಗೆ ಈಸ್ಟ್ ಕೋಸ್ಟ್ ರೋಡ್'ನಲ್ಲಿನ ಕೇಲಂಬಾಕ್ಕಂ ಎಂಬಲ್ಲಿ 2.0 ಚಿತ್ರದ ಶೂಟಿಂಗ್ ಮಾಡುತ್ತಿದ್ದಾಗ 65 ವರ್ಷದ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಬಲ ಮೊಣಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. 2.0 ಚಿತ್ರ ಭಾರತದಲ್ಲೇ ಅತೀ ಹೆಚ್ಚಿನ ವೆಚ್ಚದ ಚಿತ್ರವಾಗಿದೆ.