ನವದೆಹಲಿ: ನಟ ರಜನೀಕಾಂತ್‌ ಅವರ ಕಿರಿಯ ಪುತ್ರಿ ಸೌಂದರ್ಯಾ, ನಟ ಹಾಗೂ ಉದ್ಯಮಿ ವಿಶಾಖನ್‌ ವನಗಮುಡಿ ಜೊತೆ 2ನೇ ಮುದುವೆ ಆಗುತ್ತಿದ್ದಾರೆ. ಫೆ.11ರಂದು ಸೌಂದರ್ಯಾ ಹಾಗೂ ವಿಶಾಖನ್‌ ವಿವಾಹ ನೆರವೇರಲಿದೆ.

ಫೆ.9ರಿಂದ ವಿವಾಹ ಪೂರ್ವ ಕಾರ್ಯಕ್ರಮ ನಡೆಯಲಿದ್ದು, ಪೋಯೆಸ್‌ ಗಾರ್ಡನ್‌ನಲ್ಲಿರುವ ಚೆನ್ನೈ ನಿವಾಸದಲ್ಲಿ ನಾಂದಿ ಪೂಜೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ವಿಶಾಖನ್‌ ಔಷಧ ಕಂಪನಿ ಹೊಂದಿದ್ದಾರೆ. ಜೊತೆಗೆ ವಂಜಗರ್‌ ಉಗಾಗಂ ಚಿತ್ರದಲ್ಲಿ ನಟಿಸಿದ್ದಾರೆ. ಅಶ್ವಿನ್‌ ರಾಮ್‌ಕುಮಾರ್‌ ಜೊತೆ 2010ರಲ್ಲಿ ಸೌಂದರ್ಯಾ ವಿವಾಹ ಆಗಿದ್ದರು. 2017ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿತ್ತು.