ಬೆಂಗಳೂರು[ಆ. 18]  ಸೂಪರ್ ಸ್ಟಾರ್ ರಜನಿಕಾಂತ್  ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದಾರೆ. ಈ ದಿನವನ್ನು ರಜನಿ ಅಭಿಮಾನಿಗಳು ಟ್ವಿಟ್ಟರ್​​​ನಲ್ಲಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

#44YrsofUnmatchableRAJINISM ಎಂಬ ಹ್ಯಾಶ್‍ಟ್ಯಾಗ್ ಬಳಸಿ ಟ್ವಿಟ್ಟರ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರದ್ದೇ ಗುಣಗಾನ ಮಾಡಲಾಗಿದೆ. 

ಸ್ವಿಮ್ ಸೂಟ್‌ನಲ್ಲಿ ರಜನಿಕಾಂತ್ ಪುತ್ರಿ; ನೆಟ್ಟಿಗರ ಕ್ಲಾಸ್‌ಗೆ ಫೋಟೋ ಡಿಲೀಟ್!

ಸೂಪರ್ ಸ್ಟಾರ್, ತಲೈವರ್, ಬಾಕ್ಸ್ ಆಫೀಸ್ ಕಿಂಗ್ ಎಂದು ಕೊಂಡಾಡಲಾಗಿದೆ. ರಜನಿಕಾಂತ್ ಅವರ ಸರಳತೆಯನ್ನು ಮೆಚ್ಚಿ ಅಭಿಮಾನಿಗಳು ಅವರೊಂದಿಗೆ ಇರುವ ಪೋಟೋ ಹಂಚಿ ಸಂಭ್ರಮಿಸಿದ್ದಾರೆ.

ತಮಿಳಿನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿರುವ ರಜನಿಕಾಂತ್ ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಕಥಾ ಸಂಗಮ, ಮಾತು ತಪ್ಪದ ಮಗ, ಘರ್ಜನೆ, ಒಂದು ಪ್ರೇಮದ ಕಥೆ, ಗಲಾಟೆ ಸಂಸಾರ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಿ ಮನಗೆದ್ದಿದ್ದಾರೆ.