ಬೆಂಗಳೂರು (ಡಿ. 12): ಸೂಪರ್ ಸ್ಟಾರ್ ರಜಿನಿಕಾಂತ್ ಗೆ 68 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ.  ಅಭಿಮಾನಿಗಳ ಸಡಗರ, ಸಂಭ್ರಮದಿಂದ ತಲೈವಾ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ತಲೈವಾ ಹುಟ್ಟುಹಬ್ಬಕ್ಕೆ ಚಿತ್ರರಂಗದ ಗಣ್ಯರು ವಿಶ್ ಮಾಡಿದ್ದಾರೆ.  

ತಮ್ಮ ಅಭಿಮಾನಿಗಳಿಗಾಗಿ ರಜನಿ ವಿಶೇಷ ಗಿಫ್ಟ್ ನೀಡಿದ್ದಾರೆ. ತಮ್ಮ ಪೆಟ್ಟಾ ಚಿತ್ರದ ಟೀಸರನ್ನು ರಿಲೀಸ್ ಮಾಡಿದ್ದಾರೆ. 

 


ಇತ್ತ ಕರ್ನಾಟಕದಲ್ಲೂ ನೆಚ್ಚಿನ ನಾಯಕನಿಗಾಗಿ ಅಭಿಮಾನಿಗಳು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ ಪೂಜೆ ಸಲ್ಲಿಸಿದ್ದಾರೆ.  100ಕ್ಕೂ ಹೆಚ್ಚು ಅಭಿಮಾನಿಗಳು ಬರಿಗಾಲಿನಲ್ಲಿ ಬೆಟ್ಟ ಹತ್ತಿ ಸೇವೆ ಸಲ್ಲಿಸಿದ್ದಾರೆ.  ಫಲ ತಾಂಬೂಲದ ಜೊತೆಗೆ ರಜಿನಿಕಾಂತ್ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. 

‘ರಜಿನಿಕಾಂತ್ ನಮ್ಮ ಸೂಪರ್ ಸ್ಟಾರ್. ಅವರು ನೂರು ವರ್ಷ ಚೆನ್ನಾಗಿ ಇರಬೇಕು. ಉತ್ತಮ ಸಾಂಸಾರಿಕ,ಕಮರ್ಷಿಯಲ್ ಚಿತ್ರ ನೀಡಿ ಪ್ರೇಕ್ಷರನ್ನ ರಂಜಿಸಲಿ. ರಜಿನಿಕಾಂತ್ ರಾಜಕೀಯಕ್ಕೆ ಹೋಗೋದು ಬೇಡ’ ಎಂದಿದ್ದಾರೆ.