ಕನ್ನಡದ ರಾಜಕುಮಾರ ಅಬ್ಬರ ಶುರು ಆಗಿದೆ. ರಾಜ್ಯದ 300 ಥಿಯೇಟರ್​ನಲ್ಲಿ ರಾಜರತ್ನನ ರಾಜಭಾರ ಆರಂಭಗೊಳ್ಳಲಿದೆ. ಕಾತರದಿಂದಲೇ ಕಾಯುತ್ತಿರುವ ಅಭಿಮಾನಿ ಬಳಗವೂ ರಾಜನ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ. ರಾಜ್ಯಾದ್ಯಂತ 300 ಥಿಯೇಟರ್​ ಗಳಲ್ಲಿ  ರಾಜಕುಮಾರನ  ರಾಜಭಾರ ಶುರುವಾಗಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಹಲವೆಡೆ ಚಿತ್ರ ಪ್ರದರ್ಶನವೂ ಶುರುವಾಗಿದೆ.

ಬೆಂಗಳೂರು(ಮಾ.24): ಕನ್ನಡದ ರಾಜಕುಮಾರ ಅಬ್ಬರ ಶುರು ಆಗಿದೆ. ರಾಜ್ಯದ 300 ಥಿಯೇಟರ್​ನಲ್ಲಿ ರಾಜರತ್ನನ ರಾಜಭಾರ ಆರಂಭಗೊಳ್ಳಲಿದೆ. ಕಾತರದಿಂದಲೇ ಕಾಯುತ್ತಿರುವ ಅಭಿಮಾನಿ ಬಳಗವೂ ರಾಜನ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ. ರಾಜ್ಯಾದ್ಯಂತ 300 ಥಿಯೇಟರ್​ ಗಳಲ್ಲಿ ರಾಜಕುಮಾರನ ರಾಜಭಾರ ಶುರುವಾಗಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಹಲವೆಡೆ ಚಿತ್ರ ಪ್ರದರ್ಶನವೂ ಶುರುವಾಗಿದೆ.

ರಾಜಕುಮಾರ ಪುನೀತ್ ಬದುಕಿನ ಮಹತ್ವದ ಚಿತ್ರವಾಗಿದ್ದು, ಇಡೀ ಅಪ್ಪು ಅಭಿಮಾನಿ ಬಳಗದಲ್ಲೂ ಅತೀ ಹೆಚ್ಚು ಕುತೂಹಲ ಕೆರಳಸಿದ್ದು, ಪುನೀತ್ ಡಾನ್ಸಿಂಗ್ ಟಾಲೆಂಟ್ ಈ ಚಿತ್ರದಲ್ಲಿ ಅನಾವರಣಗೊಂಡಿದೆ. ಕೌಟುಂಬಿಕ ಕಥೆ ಹೊಂದಿರುವ ರಾಜಕುಮಾರ ಚಿತ್ರವನ್ನ ಸಂತೋಷ್ ಆನಂದ್ ರಾಮ್ ನಿರ್ದೇಶನದ ಮಾಡಿದ್ದಾರೆ.

ಬಹುತಾರಾ ಬಳಗವೇ ಈ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಸಂಗೀತ ಮೋಡಿ, ವಿಜಯ್ ಪ್ರಕಾಶ್ ಹಾಡಿರೋ ಬೊಂಬೆ ಹಾಡು ಎಲ್ಲರನ್ನೂ ಖುಷಿ ತಂದಿದೆ.