ಮುಂಬೈ(ಅ.1): ಪಾಕಿಸ್ತಾನ ಕಲಾವಿದರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ನಟ ಸಲ್ಮಾನ್ ಖಾನ್ ಅವರು ಪಾಕಿಸ್ತಾನಕ್ಕೇ ವಲಸೆ ಹೋಗಲಿ ಎಂದು ಶಿವಸೇನೆ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕಿ ಮನಿಷಾ ಕಯಾಂಡೆ ಅವರು, ಪಾಕಿಸ್ತಾನ ಕಲಾವಿದರ ಬೆನ್ನಿಗೆ ನಿಂತು ಬೆಂಬಲ ಸೂಚಿಸುತ್ತಿರುವ ಸಲ್ಮಾನ್ ಖಾನ್ ಅವರಿಗೆ ಸರಿಯಾದ ಪಾಠ ಹೇಳಬೇಕಿದೆ. ಪಾಕಿಸ್ತಾನ ಕಲಾವಿದರ ಮೇಲೆ ಸಲ್ಮಾನ್ ಅವರಿಗೆ ಅಷ್ಟೊಂದು ಪ್ರೀತಿ ಇದೆ ಎಂದಾದರೆ, ಅವರು ಪಾಕಿಸ್ತಾನಕ್ಕೆ ವಲಸೆ ಹೋಗಲಿ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಸಲ್ಮಾನ್ ಖಾನ್, ಪಾಕ್ ನಟರೆಲ್ಲಾ ಭಯೋತ್ಪಾದಕಲ್ಲ ಎಂದು ಪಾಕ್ ಕಲಾವಿದರ ಪರ ಬ್ಯಾಟಿಂಗ್ ಮಾಡಿದ್ದರು.