ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ನಿರೂಪ್‌ ಭಂಡಾರಿ ನಾಯಕ, ಎಲ್ಲಕ್ಕಿಂತ ಮುಖ್ಯವಾಗಿ ಮಣಿರತ್ನಂ ಅವರಂತಹ ದಿಗ್ಗಜ ನಿರ್ದೇಶಕರ ಜತೆ ಕೆಲಸ ಮಾಡಿದ ಪ್ರಿಯಾ ವಿ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ಈ ಎಲ್ಲಾ ಕಾರಣಗಳಿಗೆ ಮಹತ್ವ ಪಡೆದುಕೊಂಡಿರುವ ‘ಆದಿ ಲಕ್ಷ್ಮೀ ಪುರಾಣ’ ಆಡಿಯೋಗೆ ಸಜ್ಜಾಗುತ್ತಿದ್ದು, ಆ ಮೂಲಕ ಬಿಡುಗಡೆಯ ಬಾಗಿಲಿಗೆ ಬಂದಿದೆ.

ಕಮ್‌ ಬ್ಯಾಕ್‌ ಚಿತ್ರ

ಮಕ್ಕಳ ಚಿತ್ರಕ್ಕೆ ಯಶ್-ರಾಧಿಕಾ ಧ್ವನಿಕಾಣಿಕೆ!

2016ರಲ್ಲಿ ಬಂದ ‘ಸಂತು ಸ್ಟೆ್ರೖಟ್‌ ಫಾರ್‌ವರ್ಡ್‌’ ರಾಧಿಕಾ ಪಂಡಿತ್‌ ಅವರ ಕೊನೆಯ ಚಿತ್ರ. ಮೂರು ವರ್ಷಗಳ ನಂತರ ನಟಿಯಾಗಿ ಮರಳುತ್ತಿದ್ದಾರೆ. ಈ ಸಿನಿಮಾ ನಂತರ ಹೀಗೆ ಭಿನ್ನ ರೀತಿಯ ಕತೆಗಳನ್ನು ಒಳಗೊಂಡಿರುವ ಚಿತ್ರಗಳನ್ನು ಒಪ್ಪುವ ಮೂಲಕ ಎಂದಿನಂತೆ ನಟಿಯಾಗಿ ಚಿತ್ರರಂಗದಲ್ಲಿ ಮುಂದುವರಿಯುತ್ತಾರೆ. ಆ ನಿಟ್ಟಿನಲ್ಲಿ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದ ಮೇಲೆ ಸಾಕಷ್ಟುನಂಬಿಕೆ ಇಟ್ಟುಕೊಂಡು ಕಾಯುತ್ತಿದ್ದಾರೆ.

ವಿಶೇಷ ಕಾಂಬಿನೇಷನ್‌

‘ಇದು ಆದಿ ಮತ್ತು ಲಕ್ಷ್ಮಿ ಈ ಇಬ್ಬರ ಫನ್‌ ಹಾಗೂ ಎಂಟರ್‌ಟೈನ್‌ಮೆಂಟ್‌ ಸಿನಿಮಾ. ಇಬ್ಬರು ವೃತ್ತಿಪರ ಕಲಾವಿದರು. ಹೀಗಾಗಿ ನನ್ನ ಕತೆಗೆ ತಕ್ಕಂತೆ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ನೀವು ಹೊಸ ರೀತಿಯ ರಾಧಿಕಾ ಪಂಡಿತ್‌ ಅವರನ್ನು ನೋಡುತ್ತೀರಿ. ನಾನು ಕನ್ನಡತಿ ಅಲ್ಲದಿದ್ದರೂ ಅಚ್ಚುಕಟ್ಟಾಗಿ ನನ್ನ ಮೊದಲ ಸಿನಿಮಾ ಮಾಡಿ ಮುಗಿಸಿದ್ದೇನೆ ಎಂದರೆ ಅದಕ್ಕೆ ಕಾರಣ ರಾಧಿಕಾ ಪಂಡಿತ್‌, ನಿರೂಪ್‌ ಭಂಡಾರಿ, ತಾರಾ, ಸುಚೇಂದ್ರ ಪ್ರಸಾದ್‌ ಅವರಂತಹ ಪ್ರತಿಭಾವಂತ ಕಲಾವಿದರು ಇದ್ದಿದ್ದು. ಕತೆಯ ವಿಚಾರವಾಗಿ, ತಾಂತ್ರಿಕವಾಗಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಈಗ ಆಡಿಯೋ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕಿ ಪ್ರಿಯಾ ವಿ.

ಮಗಳಿಗೆ 6 ತಿಂಗಳು ತುಂಬಿದ ಸಂಭ್ರಮ ಶೇರ್ ಮಾಡಿಕೊಂಡ ರಾಧಿಕಾ

ಮುಂದಿನ ತಿಂಗಳು ತೆರೆಗೆ

ಜೂನ್‌ 14ರಂದು ಚಿತ್ರದ ಆಡಿಯೋ ಅನಾವರಣಗೊಳ್ಳಲಿದೆ. ಆ ನಂತರ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ‘ಆದಿ ಲಕ್ಷ್ಮಿ ಪುರಾಣ’ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲಿದೆ. ಈಗಾಗಲೇ ಆ ನಿಟ್ಟಿನಲ್ಲಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ತಯಾರಿ ಮಾಡಿಕೊಂಡಿದ್ದಾರೆ.