ಸ್ಯಾಂಡಲ್’ವುಡ್ ‘ನ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ, ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.
ಬೆಂಗಳೂರು (ಜು.30): ಸ್ಯಾಂಡಲ್’ವುಡ್ ‘ನ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ, ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.
ಒಂದಿಷ್ಟು ವಿವಾದಗಳು ಹಾಗೂ ವೈಯಕ್ತಿಕ ವಿಚಾರವಾಗಿ ಸುದ್ದಿಯಾದ ಬ್ಯೂಟಿಫುಲ್ ಲೇಡಿ ರಾಧಿಕಾ ಕುಮಾರಸ್ವಾಮಿ ಸ್ವೀಟಿ ಸಿನಿಮಾ ಮೂಲಕ ಸ್ಯಾಂಡಲ್'ವುಡ್ 'ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದರು. ನಂತರ ರುದ್ರ ತಾಂಡವದ ಸಿನಿಮಾ ನಂತರ ಕಾಣಿಯಾಗಿ ಬಿಟ್ಟಿದ್ದರು. ಈಗ 'ಕಂಟ್ರಾಕ್ಟ್ ' ಸಿನಿಮಾದಿಂದ ಮತ್ತೆ ಚಿತ್ರರಂಗಕ್ಕೆ ಗುಡ್ ಕಮ್ ಬ್ಯಾಕ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಾಡರ್ನ್ ಗರ್ಲ್ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ
ಕ್ಯಾಚೀ ಟೈಟಲ್ ಇಟ್ಟುಕೊಂಡು ಬರ್ತಿರೋ ಕಂಟ್ರಾಕ್ಟ್ ಸಿನಿಮಾದಲ್ಲಿ, ರಾಧಿಕಾ ಕುಮಾರಸ್ವಾಮಿ ಮಾಡರ್ನ್ ಗರ್ಲ್ ಪಾತ್ರವನ್ನ ಮಾಡ್ತಾ ಇದ್ದಾರೆ. ಅರ್ಜುನ್ ಸರ್ಜಾ ಹಾಗೂ ತೆಲುಗು ಖ್ಯಾತ ನಟ ಜೆ ಡಿ ಚಕ್ರವರ್ತಿ ಪೇರ್ ಆಗಿ ರಾಧಿಕಾ ಕುಮಾರಸ್ವಾಮಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಹಾಗೂ ತೆಲುಗು ನಟ ಜೆಡಿ ಚಕ್ರವರ್ತಿ ನಡುವಿನ ರೊಮ್ಯಾಟಿಂಕ್ ದೃಶ್ಯಗಳನ್ನ ನಿರ್ದೇಶಕ ಸಮೀರ್ ಚಿತ್ರಿಸಿಕೊಳ್ಳುತ್ತಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಉತ್ತಮ ನಟಿಯೂ ಹೌದು ಜೊತೆಗೆ ಗುಡ್ ಡ್ಯಾನ್ಸರ್. ಹೋಟೆಲ್'ನಲ್ಲಿ ನಡೆಯುವ ಸಿಕ್ವೇನ್ಸ್'ನಲ್ಲೂ ರಾಧಿಕಾ ಕುಮಾರಸ್ವಾಮಿ ಲೈಲಾ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಶರಪಂಜರ, ಭಕ್ತಿ ಪ್ರಧಾನ ಚಿತ್ರಗಳು ಹೀಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಅನ್ನೋದು ರಾಧಿಕಾ ಕುಮಾರಸ್ವಾಮಿ ಬಹು ದಿನದ ಆಸೆಯಂತೆ.
ಇನ್ನು ತೆಲುಗು ಹಾಗೂ ಹಿಂದಿಯಲ್ಲಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಜೆಡಿ ಚಕ್ರವರ್ತಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಟ್ರಯಾಂಗಲ್ ಲವ್ ಸ್ಟೋರಿ ಕಥೆ ಆಧರಿಸಿರೋ ಕಂಟ್ರಾಕ್ಟ್ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಸೌತ್ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆ ರಾಧಿಕಾ ಕುಮಾರಸ್ವಾಮಿಯ ಈ ಕಮ್ ಬ್ಯಾಕ್ ಗಾಂಧಿನಗರ ಅಲ್ಲದೇ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.
