ರಾಧಿಕಾ ಕುಮಾರಸ್ವಾಮಿ ಮತ್ತೊಂದು ಮದುವೆಯಾಗಿದ್ದಾರೆ. ವಿವೇಕ್ ರಾಜ್ ಜೊತೆ ರಾಧಿಕಾ ಮದುವೆಯಾಗಿದ್ದಾರೆಂಬ ಫೋಟೋಗಳು ಫೇಸ್ಬುಕ್`ನಲ್ಲಿ ಪ್ರತ್ಯಕ್ಷವಾಗಿದ್ದವು. ಈ ಕುರಿತು, ಸುವರ್ಣ ನ್ಯೂಸ್`ಗೆ ಪ್ರತಿಕ್ರಿಯಿಸಿರುವ ರಾಧಿಕಾ, ವಿವೇಕ್ ರಾಜ್ ನಾನೂ ಮತ್ತು ನನ್ನಣ್ಣನಿಗೆ ಸ್ನೇಹಿತರು. ಅವರು ಕೃಷಿ ಮಾಡುತ್ತಿದ್ದಾರೆ. ಅಲ್ಲಿಗೆ ತೆರಳಿದ್ದ ವೇಳೆ ಫೋಟೋ ತೆಗೆಸಿಕೊಂಡಿದ್ದೆವು. ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಅಷ್ಟೇ.. ಇದರ ಬಗ್ಗೆ ಮಾತನಾಡಲೂ ನನಗೆ ಅಸಹ್ಯವೆನಿಸುತ್ತಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ನನ್ನ ಜೊತೆ ಹಲವರು ಅಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಈ ರೀತಿ ಯಾಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಕುಟುಂಬದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.