ಹಲವು ವರ್ಷಗಳ ನಂತರ ರಾಧಿಕಾ ಕುಮಾರಸ್ವಾಮಿ ನಟನೆಯಲ್ಲಿ ಫುಲ್ ಬ್ಯುಸಿ ಆಗಿದ್ದು, ಅವರ ನಾಲ್ಕು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ. ಸ್ಯಾಂಡಲ್‌ವುಡ್ ಸ್ವೀಟಿಯ ಅಭಿಮಾನಿಗಳ ಕಾಯುವಿಕೆಗೆ ಫುಲ್ ಸ್ಟಾಪ್ ಬೀಳುತ್ತಿದ್ದು, ದಮಯಂತಿ ಟೀಸರ್ ರಿಲೀಸ್‌ಗೆ ದಿನಾಂಕ ಫಿಕ್ಸ್ ಆಗಿದೆ. 

ಪ್ಯಾನ್‌ ಇಂಡಿಯಾ ರಿಲೀಸ್‌ಗೆ ಸಿದ್ಧವಾಗುತ್ತಿರುವ ಕನ್ನಡ ಸಿನಿಮಾಗಳ ಪೈಕಿ ಈಗ ರಾಧಿಕಾ ಅಭಿನಯದ ‘ದಮಯಂತಿ’ ಕೂಡ ಒಂದು. ನವರಸನ್‌ ನಿರ್ದೇಶನದ ಈ ಚಿತ್ರ ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ. 

ರಾಧಿಕಾ ಮೊದಲಿಗೆ ಸಿಗರೇಟ್ ಸೇದಿದ್ದು ಯಾವಾಗ?

ಭೈರಾದೇವಿ ಹಾಗೂ ದಮಯಂತಿ ಚಿತ್ರಗಳಲ್ಲಿ ಒಂದೇ ರೀತಿಯ ಪಾತ್ರ ಎಂಬ ಅಭಿಮಾನಿಗಳ ಗೊಂದಲಕ್ಕೆ ರಾಧಿಕಾ ಈಗಾಗಲೇ ತೆರೆ ಎಳೆದಿದ್ದು, ದಮಯಂತಿಯಲ್ಲಿ ಅಮ್ಮನಂತಹ ಪಾತ್ರ. ಇಡೀ ಊರಿಗೆ ನೇರವು ನೀಡುತ್ತ, ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿರುವ ಮಹಿಳೆಯ ಜೀವನದಲ್ಲಿ ನಡೆಯುವ ಘಟನೆಗಳು ಈ ಚಿತ್ರದ್ದು, ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

ರಾಧಿಕಾ ಹಾಗೂ ಕುಮಾರಸ್ವಾಮಿ ನಡುವಿನ ವಯಸ್ಸಿನ ಅಂತರವೆಷ್ಟು?
 
ಇದೀಗ ರಿಲೀಸ್‌ಗೆ ಸಿದ್ಧತೆ ನಡೆಸಿರುವ ಚಿತ್ರತಂಡ ಸೆಪ್ಟೆಂಬರ್‌ 18ಕ್ಕೆ ಚಿತ್ರದ ಮೊದಲ ಟೀಸರ್‌ ಹೊರ ತರಲು ನಿರ್ಧರಿಸಿದೆ. ಕತೆ, ನಿರ್ಮಾಣದ ಜತೆಗೆ ಈ ಚಿತ್ರವು ರಾಧಿಕಾ ಅವರ ವಿಶಿಷ್ಟ ಹಾಗೂ ವಿಭಿನ್ನ ಪಾತ್ರದ ಕಾರಣಕ್ಕೆ ಕುತೂಹಲ ಹೆಚ್ಚಿಸಿದೆ. 

"