ಮುಂಬೈ(ಅ.05): ರಾಧಿಕಾ ಆಪ್ಟೆ.. ಸದಾ ಒಂದಿಲ್ಲೊಂದು ವಿವಾದಗಳನ್ನ ಸೃಷ್ಟಿಸುವ ಈ ಬಾಲಿವುಡ್ ಸುಂದರಿ ತನ್ನ `ಪರ್ಚೇದ್' ಸಿನಿಮಾದ ಲೀಕ್ಡ್ ಸೆಕ್ಸ್ ಸೀನ್ ಬಗ್ಗೆ ಪತ್ರಕರ್ತ ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾಗಿದ್ದಾರೆ. ಸಾರಿ.. ನಿನ್ನ ಪ್ರಶ್ನೆ ತುಂಬಾ ತಮಾಷೆಯಾಗಿದೆ. ವಿವಾದಗಳನ್ನ ನಿನ್ನಂತಹ ಜನ ಮಾಡುತ್ತಾರೆ. ಆ ವಿಡಿಯೋವನ್ನ ನೀನೂ ನೋಡಿದ್ದೀಯಾ.. ಇತರರೊಡನೆ ಅದನ್ನ ಶೇರ್ ಮಾಡಿದ್ದೀಯಾ.. ಸೋ ನೀನೇ ಕಾಂಟ್ರೋವರ್ಸಿ ಸೃಷ್ಟಿಸಿದೆ ಎಂದು ಉತ್ತರಿಸಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರ್ಚೇದ್ ಚಿತ್ರದಲ್ಲಿ ಅದಿಲ್ ಹುಸೇನ್ ಜೊತೆಗಿನ ರಾಧಿಕಾ ಆಪ್ಟೆಯ ಸೆಕ್ಸ್ ಸೀನ್ ಲೀಕ್ ಆಗಿತ್ತು. ಈ ಕುರಿತು, ಪ್ರತಿಕ್ರಿಯಿಸಿದ ರಾಧಿಕಾ ಸಿನಿಮಾದಲ್ಲಿ ಲೀಕ್ಡ್ ವಿಡಿಯೋಗಿಂತ ನೋಡುವುದು ಬಹಳಷ್ಟಿದೆ ಎಂದು ಸಮರ್ಥನೆ ನೀಡಿದ್ಧಾರೆ.

`ನಾನೊಬ್ಬಳು ಕಲಾವಿದೆ. ಆ ರೀತಿಯ ದೃಶ್ಯ ಅವಶ್ಯವಿದೆ ಎಂದರೆ ನಾನು ಮಾಡುತ್ತೇನೆ. ವಿಶ್ಚ ಸಿನಿಮಾ ಜಗತ್ತನ್ನ ಒಮ್ಮೆ ನೋಡಿ. ಹೊರಗಡೆ ಸಿನಿಮಾ ಹೇಗಿದೆ ಎಂಬುದನ್ನ ನೋಡಿ. ಆಗ ನೀವು ಈ ಪ್ರಶ್ನೆ ಕೇಳುವುದಿಲ್ಲ. ನನಗೆ ಇದ್ಯಾವುದರ ಬಗ್ಗೆ ನಾಚಿಕೆ ಇಲ್ಲ. ನಮ್ಮ ದೇಹದ ಬಗ್ಗೆ ಮುಜುಗರಪಡುವ ಜನ ಬೇರೆಯವರ ದೇಹದ ಬಗ್ಗೆ ಕುತೂಹಲ ಹೊಂದಿದ್ದಾರೆ. ನಾಳೆ ನಿಮಗೆ ಬೆತ್ತಲೆ ದೇಹ ನೋಡಬೇಕೆಂದೆನಿಸಿದರೆ ನಿಮ್ಮ ದೇಹವನ್ನೇ ಕನ್ನಡಿಯಲ್ಲಿ ನೋಡಿಕೊಳ್ಳಿ ಎಂದು ಖಡಕ್ ಆಗಿ ಉತ್ತರಿಸಿದ್ಧಾರೆ.