ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ನಟಿ ರಾಧಿಕಾ ಆಪ್ಟೆ ಯಾವಾಗಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಇವರ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. 

ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಮಟ್ಟದಲ್ಲಿ ನಾನು ಏಕಕಾಲದಲ್ಲಿ ಹಲವು ಜನರನ್ನು ಪ್ರೀತಿಸುತ್ತೇನೆ. ನನಗದರಲ್ಲಿ ನಂಬಿಕೆಯಿದೆ ಎಂದಿದ್ದಾರೆ. 

‘ಆಡೈ’ ಚಿತ್ರದ ಬೆತ್ತಲೆ ಗುಟ್ಟು ರಟ್ಟು ಮಾಡಿದ ಅಮಲಾ ಪೌಲ್

ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡುತ್ತಾ, ನೇಹಾ ಧುಪಿಯಾ, ನಿಮಗೆ ಯಾರ ಮೇಲಾದರೂ ಟೆಂಪ್ಟ್ ಆಗುತ್ತಾ? ಎಂದಾಗ ಖಂಡಿತ. ನಾನೊಬ್ಬ ನಟಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಆಗುತ್ತೆ ಎಂದಿದ್ದಾರೆ. 

ಲೈಫಲ್ಲಿ ಬಹಳ ಜನರನ್ನು ಭೇಟಿ ಮಾಡುತ್ತಿರುತ್ತೇವೆ. ಅವರ ಮೇಲೆ ಟೆಂಪ್ಟ್ ಆಗುತ್ತಿರುತ್ತದೆ. ಇದು ಕೆಲವೊಮ್ಮೆ ದೈಹಿಕ ಆಕರ್ಷಣೆ ಇರಬಹುದು. ಇದು ಅಂತಹ ದೊಡ್ಡ ವಿಚಾರವೇನೂ ಅಲ್ಲ ಎಂದಿದ್ದಾರೆ. 

ಬಿಗ್‌ಬಾಸ್ ಲೊಕೇಶನ್ ಚೇಂಜ್, ಈ ಬಾರಿ ಎಲ್ಲಿ ನಡೆಯುತ್ತೆ ಶೋ?

ಇನ್ನೂ ಮುಂದುವರೆದು ಮಾತನಾಡುತ್ತಾ, ಗಂಡನಿಗೆ ಏಕಪತ್ನಿಯಾಗಿ ಇರುವುದು ನಮ್ಮ ಆಯ್ಕೆಯೇ ಹೊರತು ಅದು ಬಲವಂತವಾಗಬಾರದು. ಪ್ರತಿದಿನವೂ ನಾನು ಯಾರ ಜೊತೆ ಇರಬೇಕು ಎನ್ನುವುದು ನಮ್ಮ ಆಯ್ಕೆಯಾಗಬೇಕು ಎಂದು ಡೇರಿಂಗ್ ಆಗಿ ಮಾತನಾಡಿದ್ದಾರೆ.