ನವದೆಹಲಿ :  ಬಾಲಿವುಡ್ ನಟಿ ರಾಧಿಕ ಆಪ್ಟೆ ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ಮೀ ಟೂ ಚಳವಳಿಯಲ್ಲಿ ಈ ವಿಚಾರವನ್ನು ಬಿಚ್ಚಿಟ್ಟ ರಾಧಿಕಾ ಭಾರತೀಯ ಮನರಂಜನಾ ಜಗತ್ತಿನಲ್ಲಿ ಉತ್ತಮ ಬೆಂಬಲ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ. 

ಹಾಲಿವುಡ್ ಸೆಲೆಬ್ರಿಟಿಗಳಿಂದ ಆರಂಭವಾದ ಮೀ ಟೂ ಚಳವಳಿಯಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ತಮಗಾದ  ದೌರ್ಜನ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು ಇದೀಗ ರಾಧಿಕಾ ಆಪ್ಟೆ ಕೂಡ ತಮ್ಮ ಸ್ವಂತ ಅನುಭವವನ್ನು ಈ ವೇದಿಕೆಯ ಮೂಲಕ ತಿಳಿಸಿದ್ದಾರೆ. 

ಶೂಟೀಂಗ್ ನಲ್ಲಿ ತೊಡಗಿಕೊಂಡಿದ್ದ ವೇಳೆ ಕೆಟ್ಟ ಅನುಭವವೊಂದು ಆಯಿತು. ನನ್ನ ಜೊತೆಯೇ ಚಿತ್ರದಲ್ಲಿ ನಟಿಸುತ್ತಿದ್ದ  ವ್ಯಕ್ತಿಯೋರ್ವ ನಿನಗೆ ಅರ್ಧ ರಾತ್ರಿಯಲ್ಲಿ ನನ್ನ ಸಹಾಯ ಬೇಕು ಎಂದಾದಲ್ಲಿ ನನ್ನನ್ನು ಕರೆಯಬಹುದು ಎಂದು ಹೇಳಿದ್ದ ಎಂದು ಮಾಹಿತಿ  ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಈ ಬಗ್ಗೆ ತಾವು ಫಿಲ್ಮ್ ಮೇಕರ್ ಬಳಿಕ ಮಾಹಿತಿ ಹಂಚಿಕೊಂಡಿದ್ದು ಆತನೊಂದಿಗೆ ಚಿತ್ರ ನಿರ್ಮಾಪಕರು ಖಾಸಗಿಯಾಗಿ ಮಾತನಾಡಿ ಸಮಸ್ಯೆ ನಿವಾರಿಸಿದ್ದಾಗಿ ಹೇಳಿಕೊಂಡಿದ್ದಾರೆ.