ವಿಭಿನ್ನ ಹಾವಭಾವ, ಆ ಡಿಫರೆಂಟ್ ಪ್ರೀತಿ...ಏನೋ ರಾಧ ರಮಣದ ಕಥೆಯೇ ಎಲ್ಲರಿಗೂ ಅಚ್ಚು ಮೆಚ್ಚು. ನಟನೆ, ಕಥೆಯ ಕಾರಣದಿಂದ ಸಿಕ್ಕಾಪಟ್ಟೆ ಫ್ಯಾನ್ಸ್ ಗಳಿಸಿರುವ ಈ ಸೀರಿಯಲ್‌ನಲ್ಲಿ ಆಗುತ್ತಿದೆ ಹೊಸ ಟ್ವಿಸ್ಟ್!

ಮದುವೆಯಾಗಿ ಒಂದೂವರೆ ವರ್ಷವಾದರೂ ಯಾಕಪ್ಪಾ ಈ ಮುದ್ದಾದ ಜೋಡಿ ಒಂದಾಗೋಲ್ಲ, ಎಂದು ಕೊಳ್ಳುತ್ತಿದ್ದ 'ರಾಧ ರಮಣ' ಫ್ಯಾನ್ಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಇನ್ಮೇಲೆ ಈ ಜೋಡಿಯ ರೊಮಾನ್ಸ್ ಆರಂಭವಾಗುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಬ್ಬಾ..! 480 ಸಂಚಿಕೆ ಆದ್ಮೇಲೆ ರಾಧಾ ಮಿಸ್ ಬಾಯಿಂದ ‘ರಮಣ್ ಐ ಲವ್ ಯು’ಎಂಬ ಮಾತು ಬಂದೇ ಬಿಡ್ತು. ಇದಕ್ಕೆ ಕೇಳಿ ರಾಧಾ- ರಮಣ ಫ್ಯಾನ್ಸ್ ಫುಲ್ ಖುಷ್. ಆದರೆ, ದೀಪಿಕಾ ಮಾತ್ರ ವಿಪರೀತ ಉರಿದುಕೊಂಡಿದ್ದಾಳೆ. ಕಾಂಟ್ರ್ಯಾಕ್ಟ್ ಮದ್ವೆ ಬಗ್ಗೆ ಇದ್ದ ಎಲ್ಲ ಕನ್‌ಫ್ಯೂಷನ್ ಇದೀಗ ಸಾರ್ಟ್ ಔಟ್ ಆಗಿದೆ. 

ಇಷ್ಟು ದಿನಗಳ ಕಾಲ ಹುಟ್ಟದ ಪ್ರೀತಿ ಈಗೇಕೆ ಹುಟ್ತು? ರಮಣ್ ಆ್ಯಕ್ಸಿಡೆಂಟ್‌ನಿಂದ. 

ರಮಣ್ ಆ್ಯಕ್ಸಿಡೆಂಟ್ ವಿಷಯ ಕೇಳುತ್ತಿದ್ದಂತೆ ರಾಧಾ ಮಿಸ್ ತಲೆ ಸುತ್ತಿ ಬೀಳುತ್ತಾಳೆ. ಅದರಿಂದಲೇ ಅವಳಿಗೆಷ್ಟು ಲವ್ ಇತ್ತೆಂಬುವುದು ಅರ್ಥವಾಗುತ್ತೆ! ದೀಪಿಕಾ ಹಾಗು ಸಿತಾರ ದೇವಿ ಕುತಂತ್ರದಿಂದ ಇಬ್ಬರೂ ದೂರಾನೇ ಇದ್ದರು. ಇವರಿಬ್ಬರನ್ನು ಸೇರಿಸಲು ರಮಣ್ ತಂಗಿಯೂ ತವರಿಗೆ ತೆರಳಿದ್ದಳು. ಇದರಿಂದ ಒತ್ತಡಕ್ಕೊಳಗಾಗಿದ್ದ ರಾಧಾ ಮಿಸ್ ರಮಣ್ ಪ್ರೇಮಕ್ಕೆ ಬಿದ್ದೇ ಬಿಟ್ಟರು.

’ರಾಧಾ ರಮಣ’ ಖ್ಯಾತಿಯ ರಾಧಾ ಮಿಸ್ ಗ್ಲಾಮರಸ್ ಫೋಟೋಗಳು