ಕಿರುತೆರೆಯ ದಿ ಮೊಸ್ಟ್ ಡಿಸೈರಬಲ್ ವುಮೆನ್ ‘ರಾಧಾರಮಣ’ ಫೇಮ್ ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೀರಿಯಲ್‌ನಿಂದ ಹೊರ ಬಂದಿದ್ದಾರೆ!

ಇನ್ನು ಮುಂದೆ ವಾರದಲ್ಲಿ ಐದು ರಾತ್ರಿ 9 ಗಂಟೆಗೆ ರಾಧಾ ಮಿಸ್‌ನ ಮಿಸ್ ಮಾಡಿಕೊಳ್ಳುವುದಂತೂ ಗ್ಯಾರಂಟಿ. ಏಕೆಂದರೆ ರಾಧಾ ಮಿಸ್ ಪಾತ್ರಧಾರಿ ಶ್ವೇತಾ ಪ್ರಸಾದ್ ಸೀರಿಯಲ್‌ನಿಂದ ಅವರು ಹೊರ ಬಂದಿದ್ದಾರೆ.

ರಾಧ ಮಿಸ್ ಖ್ಯಾತಿಯ ಶ್ವೇತಾ ಮತ್ತೆ ಹನಿಮೂನಿಗೆ ಹೋಗ್ಬೇಕಂತೆ

 

ಇವರು ಶ್ವೇತಾ ಪ್ರಸಾದ್‌‌ಗಿಂತ ರಾಧಾ ಮಿಸ್ ಎಂದೇ ಫೇಮಸ್. ಸೌಮ್ಯ ಸ್ವಭಾವದ, ಮುಗ್ಧ, ಸ್ವಾಭಿಮಾನ ಗೃಹಿಣಿಯ ಪಾತ್ರ ಮಾಡಿಕೊಂಡು ಎಲ್ಲರಿಗೂ ಫೇವರೆಟ್ ಆಗಿದ್ದರು. ಧಾರಾವಾಹಿಯಲ್ಲಿ ಅಭಿನಯಿಸುವುದಾಗಿ 1 ವರ್ಷದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಒಪ್ಪಂದ ಮುಗಿದು 2 ವರ್ಷಗಳಾಗಿವೆ. ಕಿರುತೆರೆಯಿಂದ ಬ್ರೇಕ್ ಬೇಕೆಂದು ಹೊರ ಬಂದಿದ್ದಾರೆ, ಎಂದು ಹೇಳಲಾಗುತ್ತಿದೆ.

ಇನ್ನು 15 ದನಗಳು ಮಾತ್ರ ಧಾರಾವಾಹಿಯಲ್ಲಿ ರಾಧಾ ಮಿಸ್ ಕಾಣಿಸಿಕೊಳ್ಳಲಿದ್ದಾರೆ. ಆಮೇಲೆ ಹೊಸ ರಾಧಾ ಮಿಸ್ ಎಂಟ್ರಿ ಕೊಡುತ್ತಾರೆ. ಯಾರಾಗಬಹುದು ಈ ಸ್ಥಾನ ತುಂಬ ಬಲ್ಲಂಥ ನಟಿ?