ಬೆಂಗಳೂರು (ನ.22): ಗಾಂಧಿನಗರದ ಹೊಸ ಪದ್ಮಾವತಿ ರಚಿತಾ ಅಂತಲೇ  ನಿರ್ದೇಶಕ  ಪ್ರೀತಂ  ಗುಬ್ಬಿ  ಅವರ  ಹೊಸ  ಚಿತ್ರದಲ್ಲಿ  ರಚಿತಾರನ್ನ  ಪರಿಚಯಿಸುತ್ತಿದ್ದಾರೆ.  ಜಾನಿ ಜಾನಿ ಎಸ್​'ಪಪಾ ಸಿನಿಮಾದಲ್ಲಿ ವಿಭಿನ್ನ  ಲುಕ್ 'ನಲ್ಲಿ ರಚಿತಾರನ್ನ ನೊಡಬಹುದು.

ರಚಿತಾ ಇನ್ನಷ್ಟು ರಂಗೇರಿದ್ದಾರೆ. ರೆಡ್'ಕಲರ್ ಇಂಡೋ ವೆಸ್ಟರ್ನ್ ಡ್ರೆಸ್​ನಲ್ಲಿ ಮಿಂಚುತ್ತಿದ್ದಾರೆ. ರಾಘವೇಂದ್ರ  ಫೋಟೊಗ್ರಫಿಯಲ್ಲಿ  ರಚ್ಚು ರಂಗೇರಿದ್ದಾರೆ.  ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಸಿನಿಮಾದ ಮುಂದುವರಿದ ಭಾಗವೇ ಜಾನಿ ಜಾನಿ ಎಸ್​ಪಪಾ ಆಗಿದ್ದು ದುನಿಯಾ ವಿಜಿ ಜೊತೆ ರಮ್ಯಾ ಪಾತ್ರವನ್ನ ರಚಿತಾ ಮಾಡುತ್ತಿದ್ದಾರೆ. ಅ ದಕ್ಕೆ ಹೇಳಿದ್ದು ಗಾಂಧಿನಗರದ ಹೊಸ ಪದ್ಮಾವತಿ ಅಂತ. ಅದೇನೆ ಇದ್ದರೂ ಈ ಚಿತ್ರದಲ್ಲಿ ರಚಿತಾ ಗ್ಲ್ಯಾಮರ್  ಗೊಂಬೆಯಾಗಿ  ಸ್ಟೈಲಿಷ್  ಸುಂದರಿಯಾಗಿ ಮಿಂಚಲಿದ್ದಾರೆ.