ಬೆಂಗಳೂರು (ಜ. 03): ಗುಳಿಕೆನ್ನೆ ಚೆಲುವೆ ರಚಿತಾರಾಮ್ ಹೊಸ ವರ್ಷಕ್ಕೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದು ಅವರ ಮದುವೆ ವಿಚಾರಕ್ಕೆ ಸಂಬಂಧಿಸಿದ್ದು. ಅದೇನೋ ಗೊತ್ತಿಲ್ಲ, ಸಿನಿಮಾ ಸಂಬಂಧಿತ ಸುದ್ದಿಗೋಷ್ಠಿಗಳ ಮೂಲಕ ರಚಿತಾ ರಾಮ್ ಮಾಧ್ಯಮದ ಮುಂದೆ ಬಂದಾಗೆಲ್ಲ ಆ ಸಿನಿಮಾದಲ್ಲಿನ ಅವರ ಪಾತ್ರ, ಅಭಿನಯ ಇತ್ಯಾದಿ ಸುದ್ದಿ ಆಗುವುದಕ್ಕಿಂತ ಅವರ ಮದುವೆ ವಿಚಾರವೇ ಹೆಚ್ಚು ಸದ್ದು ಮಾಡುತ್ತದೆ.

ಇತ್ತೀಚೆಗೆ ‘ಐ ಲವ್ ಯು’ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಹೆಚ್ಚು ಸುದ್ದಿ ಆಗಿದ್ದು ಅವರ ಮದುವೆ ಸಮಾಚಾರವೇ. ರಚಿತಾ ರಾಮ್ ಮದ್ವೆ ಆಗಲ್ವಾ, ರಾಜಕಾರಣಿಯನ್ನು ಮದುವೆ ಆಗ್ತಿದ್ದೀರಾ ಎನ್ನುವ ಗಾಂಧಿನಗರದ ಗಾಸಿಪ್ ನಿಜವೇ ಇತ್ಯಾದಿ ಪ್ರಶ್ನೆಗಳೇ ಅವರನ್ನು ಕೆರಳಿಸಿ ಕುಳಿತವು. ಈ ಪ್ರಶ್ನೆಗಳಿಗೆ ಬೇಸತ್ತು ಹೋದ ಅವರು ‘ಆಗುವುದಾದರೆ , ಏನೀವಾಗ’ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದರು. ಅವರು ಹೇಳಿದ ಎರಡು ಮಾತುಗಳು ಹೀಗಿವೆ:

1. ನಾನು ಸಿಂಗಲ್ ಆಗಿರೋದು ಯಾಕೆ ಯಾರಿಗೂ ಇಷ್ಟವಾಗುತ್ತಿಲ್ಲವೋ ಗೊತ್ತಿಲ್ಲ. ಎಲ್ಲೇ ಸಿಕ್ಕರೂ ಮದುವೆ ಯಾವಾಗ, ಯಾರನ್ನು ಮದುವೆ ಆಗ್ತಿದ್ದೀರಿ ಎನ್ನುವ ಮಾತಿದೆ, ನಿಜವೇ ಎಂದೆಲ್ಲಾ ಕೇಳು ವುದು ಮಾಮೂಲು ಆಗಿ ಬಿಟ್ಟಿದೆ. ನನ್ನ ಮದುವೆ ವಿಚಾರದಲ್ಲಿ ಅವರಿಗೇನು ಆಸಕ್ತಿಯೋ ಗೊತ್ತಿಲ್ಲ. ನಿಜ, ಮದುವೆ ಆಗಲೇ ಬೇಕು. ಆದ್ರೆ ನಾನೀಗ ಸಿನಿಮಾದಲ್ಲಿ ಬ್ಯುಸಿ ಇದ್ದೇನೆ. ನನ್ನ ಗಮನ ನನ್ನ ಕೆರಿಯರ್ ಮೇಲಿದೆ.

ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೇನೆ. ಒಂದೆರಡು ಸಿನಿಮಾ ರಿಲೀಸ್‌ಗೂ ರೆಡಿಯಿವೆ. ಆದರೂ ಪದೇಪದೆ ನನ್ನ ಮದುವೆ ವಿಚಾರವನ್ನೇ ಕೆದಕುವವರಲ್ಲಿ ನನ್ನದೊಂದು ವಿನಂತಿ, ನಾನ್ ಮದುವೆಗೆ ರೆಡಿಯಿದ್ದೇನೆ. ಆದರೆ, ವರ ಯಾರು ಅಂತ ಗೊತ್ತಿಲ್ಲ. ನಂಗ್ಯಾರೂ ಬಾಯ್ ಫ್ರೆಂಡ್ ಕೂಡ ಇಲ್ಲ. ಯಾವ ರಾಜ ಕಾರಣಿ ಯೂ ಮದುವೆ ಆಗ್ತೀನಿ ಅಂತ ನನ್ನ ಮನೆ ಬಾಗಿಲಿಗೆ ಬಂದಿಲ್ಲ. ನೀವೇ ಒಂದೊಳ್ಳೆ ವರ ಹುಡುಕಿ ಕೊಡಿ, ಆತನನ್ನೇ ಮದುವೆ ಆಗ್ತೀನಿ.

2.. ಪ್ರತಿಯೊಬ್ಬ ತಂದೆ-ತಾಯಿಗೆ ತನ್ನ ಮಗಳಿಗೆ ಎಂತಹ ಹುಡುಗ ಬೇಕು, ಆಕೆ ಹೋಗುವ ಮನೆ ಹೇಗಿರಬೇಕು ಅಂತೆಲ್ಲ ಕನಸು, ನಿರೀಕ್ಷೆಗಳಿರುತ್ತವೆಯೋ ಅಂತಹದೇ ಕನಸು ಮತ್ತು ನಿರೀಕ್ಷೆ ನನ್ನ ತಂದೆ-ತಾಯಿಗೂ ಇದೆ. ಅದು ಫುಲ್‌ಫಿಲ್ ಆದ್ರೆ ಸಾಕು. ನನ್ನದೇನೂ  ಹೆಚ್ಚು ನಿರೀಕ್ಷೆಗಳಿಲ್ಲ.