ಸಾಹಿತಿ ಬಿಎಲ್ ವೇಣು ಅವರ ‘ಕೆಲಸದಾಕೆ’ ಎನ್ನುವ ಪುಟ್ಟ ಕತೆ ಆಧರಿಸಿದ ದೊಡ್ಡ ಸಿನಿಮಾ. ಕನ್ನಡ ಚಿತ್ರರಂಗದ ಹಳೆಯ ನಿರ್ದೇಶಕ ಚಿಕ್ಕಣ್ಣ ಸಿನಿಮಾ ಇದು. ತಮ್ಮ 73 ನೇ ವಯಸ್ಸಿನಲ್ಲೂ ಯಂಗ್ ಜನರೇಷನ್ ಜತೆಗೂ ಸಿನಿಮಾ ಮಾಡುತ್ತಿದ್ದಾರೆ. ರಂಗಾಯಣ ರಘು, ರಮೇಶ್ ಭಟ್, ಎಂ ಎಸ್ ಉಮೇಶ್, ಮಜಾ ಟಾಕೀಸ್ ಪವನ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಕ್ಷಿತ್ ಹೆಸರಿನ ಮಹೇಶ್ ಈಗಾಗಲೇ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ನಟ. ‘ಪುಟ್ಟಗೌರಿ ಮದುವೆ’ ಧಾರಾವಾಹಿ ನೋಡಿದವರಿಗೆ ಇವರ ಪರಿಚಯವಿರುತ್ತದೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಸೋನು ಗೌಡ ಜತೆಗೆ ಬಾಂಬೆ ಮೂಲದ ಇಶಾ ಛಾಬ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಜತೆಗೆ ‘ಸವ್ವಾಲ್’ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಹುಡುಗಿ ಈಕೆ. ತುಂಬಾ ವರ್ಷಗಳ ನಂತರ ಈಗ ಚಿಕ್ಕಣ್ಣ ನಿರ್ದೇಶನದ ‘ಕಾಲ್+ ಎ= ಕಾಲೇಜ್ ’ ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಬಂದಿದ್ದಾರೆ.

‘ನನ್ನ ಈ ಚಿತ್ರದ ಕತೆ ಬಿಎಲ್ ತುಂಬಾ ಹಿಂದೆಯೇ ಬರೆದಿದ್ದರು. ಅದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಣೆಯಾಗಿತ್ತು. ಅದೇ ಕತೆಗೆ ನಾನು ಬೇರೆ ಹೆಸರಿಟ್ಟು ಸಿನಿಮಾ ಮಾಡಿದ್ದೇನೆ. ವೇಣು ಅವರೇ ಸಂಭಾಷಣೆ ಬರೆದಿದ್ದಾರೆ. ಚಿತ್ರೀಕರಣ ಮುಗಿದಿದೆ’ ಎನ್ನುತ್ತಾರೆ ನಿರ್ದೇಶಕ ಚಿಕ್ಕಣ್ಣ