Asianet Suvarna News Asianet Suvarna News

ಪುನೀತ್ ಹೊಸ ಚಿತ್ರ 'ಕ್ರಾಂತಿ ವೀರ'

ಪುನೀತ್ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಷನ್‌ನ ಹೊಸ ಚಿತ್ರದ ಹೆಸರು ‘ಕ್ರಾಂತಿ ವೀರ’.

Punith Rajkumar next project Kranti veera
Author
Bengaluru, First Published Oct 30, 2018, 9:26 AM IST
  • Facebook
  • Twitter
  • Whatsapp

ಭಾರಿ ಕುತೂಹಲ ಮೂಡಿಸಿದ್ದ ವಿಜಯ ಕಿರಗಂದೂರು ನಿರ್ಮಾಣದ ಈ ಚಿತ್ರಕ್ಕೆ ‘ಕ್ರಾಂತಿ ವೀರ’ ಎಂದು ಹೆಸರಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪರುಶುರಾಮ, ಜ್ವಾಲಮುಖಿ ಹೀಗೆ ಬೇರೆ ಬೇರೆ ಹೆಸರುಗಳು ಓಡಾಡುತ್ತಿತ್ತು. ಈ ಸಾಲಿಗೆ ಈಗ ‘ಕ್ರಾಂತಿ ವೀರ’ ಹೆಸರು ಸೇರಿಕೊಂಡಿದೆ.

ಆರ್ ರಾಮಮೂರ್ತಿ ನಿರ್ದೇಶಿಸಿ, ನಿರ್ಮಿಸಿರುವ, 1972 ರಲ್ಲಿ ತೆರೆಕಂಡ ಡಾ ರಾಜ್ ಕುಮಾರ್ ಅಭಿನಯದ ‘ಕ್ರಾಂತಿ ವೀರ’ ಚಿತ್ರದ ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ ಎನ್ನಲಾಗಿದೆ. ಆ ಮೂಲಕ ಮೂರನೇ ಚಿತ್ರಕ್ಕೂ ಹಳೆಯ ಹೆಸರುಗಳ ಮೊರೆ ಹೋಗಿರುವ ಸಂತೋಷ್ ಆನಂದ್‌ರಾಮ್, ಚಿತ್ರದ ಟೈಟಲ್ ಅನ್ನು ನ.1ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

Follow Us:
Download App:
  • android
  • ios