. ಲವ್ ಕಮ್ ಆರೇಂಜ್ ಮ್ಯಾರೇಜ್ ಆದ ಪುನೀತ್ ರಾಜ್ ಕುಮಾರ್,

ಕನ್ನಡ ಚಿತ್ರರಂಗದ ಕ್ಯೂಟ್ ಫೇರ್ ಅಂದ್ರೆ ಅದು ಪುನೀತ್ ರಾಜ್ ಕುಮಾರ್ ಹಾಗು ಪತ್ನಿ ಅಶ್ವಿನಿ.ಈ ಜೋಡಿಗೆ ವಿವಾಹ ವಾರ್ಷಿಕೊತ್ಸವದ ಸಂಭ್ರಮ. ಇವರ ದಾಂಪತ್ಯ ಜೀವನಕ್ಕೆ 17 ವರ್ಷ ತುಂಬುತ್ತಿದೆ.ಇವತ್ತಿಗೆ ಅಶ್ವಿನಿಯವರನ್ನು ಪುನೀತ್ ರಾಜ್ ಕುಮಾರ್ ಮದುವೆ ಆಗಿ 17 ವರ್ಷ ತುಂಬುತ್ತಿದೆ.

1999ರ ಡಿಸೆಂಬರ್ 1 ರಂದು ಪುನೀತ್ ರಾಜ್ ಕುಮಾರ್ - ಅಶ್ವಿನಿ ಜೊತೆ ಹಸೆಮಣೆ ಏರಿದರು. ಲವ್ ಕಮ್ ಆರೇಂಜ್ ಮ್ಯಾರೇಜ್ ಆದ ಪುನೀತ್ ರಾಜ್ ಕುಮಾರ್, ಇಂದು ಅಶ್ವಿನಿ ಜೊತೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ 17ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

ಇಬ್ಬರು ದಂಪತಿಗೆ ಮುದ್ದಾದ ಮಕ್ಕಳಿದ್ದಾರೆ. ಪುನಿತ್ ಅದೆಷ್ಟೋ ಸಿನಿಮಾ ಶೂಟಿಂಗ್ ಇದ್ದರೂ, ಬಿಡುವು ಮಾಡಿಕೊಂಡು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.