ಪುನೀತ್ ರಾಜ್‌ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಬರುತ್ತಿರುವುದು ಗೊತ್ತಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವೇ ಸದ್ಯ ಅಪ್ಪು ಮುಂದಿರುವ ಹೊಸ ಸಿನಿಮಾ.
ಬೆಂಗಳೂರು (ಫೆ. 27): ಪುನೀತ್ ರಾಜ್ಕುಮಾರ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ಬರುತ್ತಿರುವುದು ಗೊತ್ತಿದೆ. ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವೇ ಸದ್ಯ ಅಪ್ಪು ಮುಂದಿರುವ ಹೊಸ ಸಿನಿಮಾ.
ಇದು ಹಾರರ್ ಸಿನಿಮಾ ಎನ್ನುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಚಿತ್ರತಂಡ ಮಾತ್ರ ಯಾವುದೇ ರೀತಿಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಅದೇ ರೀತಿ ಚಿತ್ರದ ಹೆಸರು ಏನೆಂಬುದು ಕೂಡ ಗುಟ್ಟಾಗಿಯೇ ಇಟ್ಟಿತ್ತು. ಆದರೆ, ಇದೀಗ ಹೆಸರು ಬಹಿರಂಗವಾಗಿದೆ. ಚಿತ್ರಕ್ಕೆ ‘ಪಂಜು’ ಎನ್ನುವ ಹೆಸರಿಡಲಾಗಿದೆ. ಪುನೀತ್ ಹಾಗೂ ಪವನ್ ಇಬ್ಬರು ಜತೆಯಾಗಿಯೇ ಚಿತ್ರದ ಹೆಸರು ಅಂತಿಮಗೊಳಿಸಿದ್ದಾರೆಂಬುದು ಸದ್ಯ ಹೊಸ ಸುದ್ದಿ
