ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾರ್ಚ್ 17ಕ್ಕೆ 44 ವಸಂತಗಳನ್ನು ಪೂರೈಸಲಿದ್ದಾರೆ. ಆದರೆ, ಮಾರ್ಚ್ 16ರ ರಾತ್ರಿಯಿಂದಲೇ ಮನೆಯಲ್ಲಿರುವುದಿಲ್ಲ. ಮನೆಯ ಹತ್ತಿರ ಬರುವುದೇ ಬೇಡವೆಂದು ಅಭಿಮಾನಿಗಳಿಗೆ ಮುಂಚಿತವಾಗಿಯೇ ತಿಳಿಸಿದ್ದಾರೆ. ಆ ಮೂಲಕ ಅಭಿಮಾನಿಗಳೊಂದಿಗೆ ಬರ್ತ್‌ ಡೇ ಆಚರಿಸಿಕೊಳ್ಳುವುದಿಲ್ಲವೆಂಬುದನ್ನು ಖಚಿತಪಡಿಸಿದ್ದಾರೆ. ಫ್ಯಾನ್ಸ್‌ ಇದರಿಂದ ಫುಲ್ ಬೇಜಾರಾಗಿದ್ದಾರೆ.

ಒಂದ್ ನಿಮಿಷ...ನಿಲ್ಲಿ. ಇದರೊಂದಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಪವರ್ ಸ್ಟಾರ್. ಮಾರ್ಚ್ 17ರ ಬೆಳಗ್ಗೆ 'ಯುವರತ್ನ' ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಹೇಳಿ, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

ಪ್ರತಿವರ್ಷವೂ ಪವರ್ ಬರ್ತ್‌ಡೇ ಪವರ್‌ಫುಲ್ ಆಗಿರುತ್ತದೆ. ಆದರೆ, ಈ ಸಲ ಮಾತ್ರ ಸ್ವಲ್ಪ ಬದಲಾವಣೆ ಆಗಿದೆ. ಅದುವೇ ಮಾರ್ಚ್ 16 ರಂದು ತಾವು ಮನೆಯಲ್ಲಿ ಇರುವುದಿಲ್ಲ ಎಂದು ಪುನೀತ್ ಹೇಳಿಕೊಂಡಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಮೂಲಕ ಹೇಳಿಕೊಂಡಿದ್ದಾರೆ. ತಮ್ಮ ಮನವಿಗೆ ಓಗೊಟ್ಟರೆ ಮಾರ್ಚ್ 17ಕ್ಕೆ ಸಿಗುವುದು, ಎಂದೂ ಪ್ರೀತಿಯಿಂದಲೇ ಬೆದರಿಸಿದ್ದಾರೆ.

 

ಅಲ್ಲದೇ, ‘ದಯಮಾಡಿ ಯಾರೂ ಕೇಕ್ , ಹಾರ, ಹೂಗುಚ್ಚ ಮತ್ತಿತ್ತರೆ ಗಿಫ್ಟ್ ತರಬೇಡಿ. ಅದರ ಬದಲು ನಿಮಗೆ ಉಪಯೋಗವಾಗುವಂಥದ್ದಕ್ಕೆ ಬಳಸಿ. ಪ್ರೀತಿ, ವಿಶ್ವಾಸದಿಂದ ಬಂದು ಹಾರೈಸಿದರೆ ಸಾಕು.’ಎಂದು ಕೇಳಿಕೊಂಡಿದ್ದಾರೆ.