ಪುನೀತ್ ರಾಜ್'ಕುಮಾರ್ ಮುಂದಿನ ಸಿನಿಮಾ ಇದು

Puneeth Rajkumar Next Cinema
Highlights

ನಟ ಪುನೀತ್ ರಾಜ್‌ಕುಮಾರ್ ಅವರ ಮುಂದಿನ ಸಿನಿಮಾ ಯಾವುದು?  ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಬೆಂಗಳೂರು (ಜ.11): ನಟ ಪುನೀತ್ ರಾಜ್‌ಕುಮಾರ್ ಅವರ ಮುಂದಿನ ಸಿನಿಮಾ ಯಾವುದು?  ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಸದ್ಯಕ್ಕೆ ‘ಅಂಜನಿಪುತ್ರ’ದ ಸಂಭ್ರಮ ಮುಗಿಸಿರುವ ಪವರ್‌ಸ್ಟಾರ್, ಮುಂದೆ ಸಂತೋಷ್ ಆಂನದ್ ರಾಮ್ ನಿರ್ದೇಶನದ ಚಿತ್ರಕ್ಕೆ ತಯಾರಾಗುತ್ತಿದ್ದಾರೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ಮತ್ತೊಮ್ಮೆ ‘ರಣವಿಕ್ರಮ’ ಕಾಂಬಿನೇಷನ್ ಸೆಟ್ಟೇರುತ್ತಿದೆ. ಹೌದು, ಪುನೀತ್ ರಾಜ್‌ಕುಮಾರ್ ಮುಂದಿನ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಸೆಟ್ಟೇರಲಿದೆ.

ಆ ಮೂಲಕ ‘ರಣವಿಕ್ರಮ’ ಸಿನಿಮಾ ನಂತರ ಮತ್ತೊಮ್ಮೆ ಪವನ್ ಒಡೆಯರ್ ಹಾಗೂ ಪುನೀತ್‌ರಾಜ್ ಕುಮಾರ್ ಒಂದಾಗುತ್ತಿದ್ದಾರೆ. ‘ಅಂಜನೀಪುತ್ರ ಚಿತ್ರದ ನಂತರ ಇದ್ದಿದ್ದು ನನ್ನದೇ ನಿರ್ಮಾಣದ ಸಿನಿಮಾ. ಹೀಗಾಗಿ ಪವನ್ ಒಡೆಯರ್ ನಿರ್ದೇಶನದಲ್ಲಿ ಮುಂದಿನ ತಿಂಗಳು ಸಿನಿಮಾ ಸೆಟ್ಟೇರುತ್ತಿದೆ. ಕತೆ ಎಲ್ಲ ಓಕೆ ಆಗಿದೆ. ಇನ್ನು ತಾಂತ್ರಿಕ ವರ್ಗ ಹಾಗೂ ಕಲಾವಿದರ ಆಯ್ಕೆ ನಡೆಯಬೇಕಿದೆ. ಈ ಬಾರಿಯೂ ಅಪ್ಪು ಅಭಿಮಾನಿಗಳನ್ನು ಮೆಚ್ಚಿಸುವ ಜತೆಗೆ ಎಲ್ಲ ವರ್ಗದ ಪ್ರೇಕ್ಷಕರು ನೋಡುವಂತಹ ಸಿನಿಮಾ ಮಾಡುತ್ತೇವೆ. ಆ ನಿಟ್ಟಿನಲ್ಲೇ ಪವನ್ ಒಡೆಯರ್ ಅವರು ಕತೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಹಾಗೆ ನೋಡಿದರೆ ಪವನ್ ಒಡೆಯರ್ ಅವರು ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಲಾಂಚ್ ಮಾಡಿಸುವ ತಯಾರಿಯಲ್ಲಿದ್ದಾರೆಂಬ ಸುದ್ದಿ ಇದೆ. ಆದರೆ, ಮುಂದಿನ ತಿಂಗಳೇ ರಾಕ್‌ಲೈನ್ ನಿರ್ಮಾಣದ ಸಿನಿಮಾ ಶುರುವಾಗುವುದಾದರೆ, ಅಭಿಷೇಕ್ ನಟನೆಯ ಚಿತ್ರವನ್ನು ಪವನ್ ಯಾವಾಗ ಶುರು ಮಾಡುತ್ತಾರೆ. ನಿರ್ಮಾಪಕ ಸಂದೇಶ್  ನಾಗರಾಜ್ ಅವರು ಈಗಾಗಲೇ ಕತೆ, ಚಿತ್ರಕತೆ ಎಲ್ಲವನ್ನೂ ಅಂತಿಮಗೊಳಿಸಿದ್ದಾರೆ. ಹೀಗಾಗಿ ಪವನ್ ಒಡೆಯರ್ ಯಾವ ಚಿತ್ರವನ್ನು ಮೊದಲು ಶುರು ಮಾಡುತ್ತಾರೋ ಗೊತ್ತಿಲ್ಲ. ಆದರೆ, ರಾಕ್‌ಲೈನ್ ವೆಂಕಟೇಶ್ ಅವರು ಹೇಳುವ ಪ್ರಕಾರ ಮುಂದಿನ ತಿಂಗಳೇ ಪುನೀತ್ ನಟನೆಯಲ್ಲಿ, ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಸೆಟ್ಟೇರುತ್ತಿದೆ.

 

loader