ಈ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ಪುನೀತ್ ಹೊಸ ಸಿನಿಮಾ

entertainment | Saturday, February 24th, 2018
Suvarna Web Desk
Highlights

ಪುನೀತ್ ಮುಂದಿನ ಸಿನಿಮಾ ಯಾವುದು ಅಂತ ಕೇಳಿದರೆ ಒಂದು ದೊಡ್ಡ ಪಟ್ಟಿಯೇ ಸಿಗುತ್ತದೆ. ಮೊನ್ನೆಯಷ್ಟೇ ಮದುವೆ ಮಾಡಿಕೊಂಡ ಸಂತೋಷ್  ಆನಂದ್‌ರಾಮ್, ಕತೆ ಹಿಡಕೊಂಡು ಕಾಯುತ್ತಿರುವ ಪವನ್ ಒಡೆಯರ್, ಸರದಿಯ ಸಾಲಲ್ಲಿರುವ ಶಶಾಂಕ್ ನಿರ್ದೇಶನದ ಸಿನಿಮಾಗಳು ಈಗಾಗಲೇ ಘೋಷಣೆ ಆಗಿವೆ. ಮೊದಲು ಬರುವುದು ಪವನ್ ಒಡೆಯರ್ ಸಿನಿಮಾ ಅಂತಲೂ ಸುದ್ದಿಯಾಗಿತ್ತು. ಈ ನಡುವೆ ಪುನೀತ್ ಕಾಲಿವುಡ್‌ನ ಹೆಸರಾಂತ ನಿರ್ದೇಶಕ ಗೌತಮ್ ಮೆನನ್ ಸಿನಿಮಾದಲ್ಲಿ ಅಭಿನಯಿಸಲು ರೆಡಿ ಆಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಗೌತಮ್ ಮೆನನ್ ಅಧಿಕೃತಗೊಳಿಸಿದ್ದಾರೆ. 

ಬೆಂಗಳೂರು (ಫೆ.24): ಪುನೀತ್ ಮುಂದಿನ ಸಿನಿಮಾ ಯಾವುದು ಅಂತ ಕೇಳಿದರೆ ಒಂದು ದೊಡ್ಡ ಪಟ್ಟಿಯೇ ಸಿಗುತ್ತದೆ. ಮೊನ್ನೆಯಷ್ಟೇ ಮದುವೆ ಮಾಡಿಕೊಂಡ ಸಂತೋಷ್  ಆನಂದ್‌ರಾಮ್, ಕತೆ ಹಿಡಕೊಂಡು ಕಾಯುತ್ತಿರುವ ಪವನ್ ಒಡೆಯರ್, ಸರದಿಯ ಸಾಲಲ್ಲಿರುವ ಶಶಾಂಕ್ ನಿರ್ದೇಶನದ ಸಿನಿಮಾಗಳು ಈಗಾಗಲೇ ಘೋಷಣೆ ಆಗಿವೆ. ಮೊದಲು ಬರುವುದು ಪವನ್ ಒಡೆಯರ್ ಸಿನಿಮಾ ಅಂತಲೂ ಸುದ್ದಿಯಾಗಿತ್ತು. ಈ ನಡುವೆ ಪುನೀತ್ ಕಾಲಿವುಡ್‌ನ ಹೆಸರಾಂತ ನಿರ್ದೇಶಕ ಗೌತಮ್ ಮೆನನ್ ಸಿನಿಮಾದಲ್ಲಿ ಅಭಿನಯಿಸಲು ರೆಡಿ ಆಗಿದ್ದಾರೆ. ಈ ಸುದ್ದಿಯನ್ನು ಸ್ವತಃ ಗೌತಮ್ ಮೆನನ್ ಅಧಿಕೃತಗೊಳಿಸಿದ್ದಾರೆ. 

ದಕ್ಷಿಣ ಭಾರತದ ಹೆಸರಾಂತ ನಟರಾದ ಮಾಧವನ್, ಪುನೀತ್ ರಾಜ್ ಕುಮಾರ್ ಹಾಗೂ ಟುವಿನೋ ಥಾಮಸ್'ರಂತಹ ಮಲ್ಟಿಸ್ಟಾರ್ ಜತೆಗೆ ತಾವು ಕೆಲಸ ಮಾಡುವ ಸದಾವಕಾಶಕ್ಕೆ ಕಾಯುತ್ತಿರುವುದಾಗ ಗೌತಮ್ ಮೆನನ್ ಹೇಳಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಕಾಲಿವುಡ್ ಮಟ್ಟಿಗೆ ನಿರ್ದೇಶಕ ಗೌತಮ್ ಮೆನನ್ ಅವರದ್ದು ಯಶಸ್ವಿ ಹೆಸರು.‘ವಾರನಮ್ ಆಯಿರಮ್  ’ಸೇರಿದಂತೆ ಹಲವು ಸಕ್ಸಸ್‌ಫುಲ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಅವರದು. 2010 ರಲ್ಲಿ ಅವರೇ ನಿರ್ದೇಶಿಸಿ ತೆರೆಗೆ ತಂದ ‘ವಿನೈ ತಾಂದಿ ವರುವಾಯ ’ ಚಿತ್ರ ಬಾಕ್ಸಾಫೀಸ್ ಕೊಳ್ಳೆಹೊಡೆದಿತ್ತು. ಈಗ ಅದೇ ಚಿತ್ರದ  ಸಕ್ವೆಲ್ ತೆರೆಗೆ ತರಲು ಮುಂದಾಗಿದ್ದಾರೆ ಗೌತಮ್ ಮೆನನ್. ಒಂದಲ್ಲ ಎರಡಲ್ಲ ಏಕಕಾಲದಲ್ಲಿಯೇ ಈ ಚಿತ್ರವನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ತೆರೆಗೆ ತರಲು ಚಿಂತನೆ ಗೌತಮ್ ಅವರದ್ದು. ಬಾಲಿವುಡ್ ನಟ ಮಾಧವನ್, ಮಲಯಾಳಂನಲ್ಲಿ ಟುವಿನೋ ಥಾಮಸ್ ಹಾಗೆಯೇ ಪುನೀತ್ ರಾಜ್ ಕುಮಾರ್ ಆ ಚಿತ್ರಕ್ಕೆ ಹೀರೋ ಎನ್ನುವುದು ಗೌತಮ್ ಮೆನನ್ ಹೇಳಿಕೆ.

ಗೌತಮ್ ಮೆನನ್ ಮಟ್ಟಿಗೆ ಇದೊಂದು ಬಿಗ್ ಪ್ರಾಜೆಕ್ಟ್. ನಾಲ್ವರು ಟಾಪ್ ಹೀರೋ ಗಳು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಇರಲಿದ್ದಾರೆನ್ನುವುದು  ಮಾತ್ರವಲ್ಲ, ಮಲ್ಟಿಸ್ಟಾರ್‌ಗಳನ್ನೇ ಈ  ಚಿತ್ರದಲ್ಲಿ ತರುವ ಆಲೋಚನೆಲ್ಲಿದ್ದಾರೆ ಗೌತಮ್ ಮೆನನ್. ಮೂಲಗಳ ಪ್ರಕಾರ ಕಾರ್ತಿಕ್, ಸಿಂಬು ಸೇರಿದಂತೆ ಹಲವರು ಇದರ ಪ್ರಮುಖ ಆಕರ್ಷಣೆ ಎನ್ನಲಾಗಿದೆ.  ಹಾಗೆಯೇ ನಟ ಪುನೀತ್ ರಾಜ್ ಕುಮಾರ್ ಈ ಚಿತ್ರದ ಮತ್ತೊಂದು ಆಕರ್ಷಣೆ. ದಕ್ಷಿಣ ಭಾರತದ ಸ್ಟಾರ್ ನಟರನ್ನೇ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರೆ  ಎಲ್ಲಾ ಭಾಷೆಗಳಿಗೂ ಸುಲಭವಾಗಿ ತಲುಪಬಹುದು ಎನ್ನುವುದು ಗೌತಮ್ ಮೆನನ್ ಲೆಕ್ಕಚಾರ.

ಸದ್ಯಕ್ಕೆ ಈ ಚಿತ್ರದ ಬಗ್ಗೆ ನಟ ಪುನೀತ್ ರಾಜ್ ಕುಮಾರ್ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗೊಂದು ವೇಳೆ ಈ ಚಿತ್ರದಲ್ಲಿ ಒಪ್ಪಿಕೊಂಡರೆ ಇದೇ ಮೊದಲು ದಕ್ಷಿಣ ಭಾರತದ ಮಲ್ಟಿಸ್ಟಾರ್ ಜತೆಗೆ ಬಹು ಭಾಷೆಗಳಲ್ಲಿ ತೆರೆ ಮೇಲೆ ಬರುವುದು ಗ್ಯಾರಂಟಿ.

Comments 0
Add Comment

    ಓಲಾದಲ್ಲಿ ಖ್ಯಾತನಟಿಯ ಬೆಲೆಬಾಳುವ ವಸ್ತು ಮಿಸ್ಸಾಯ್ತು

    entertainment | Saturday, May 26th, 2018