ಟೆರರಿಸ್ಟ್ ಜೊತೆ ಪುನೀತ್, ರಕ್ಷಿತ್ ಶೆಟ್ಟಿ | ಅಭಿಮಾನಿಗಳಿಗೆ ಶಾಕ್ | ಟೆರರಿಸ್ಟ್‌ರಿಂದ ತಪ್ಪಿಸಿಕೊಂಡು ಬರುತ್ತಾರಾ ಪುನೀತ್, ರಕ್ಷಿತ್? 

ಬೆಂಗಳೂರು (ಸೆ. 01): ಹೆಸರಿನಿಂದಲೇ ಕುತೂಹಲ ಮೂಡಿಸಿರುವ ರಾಗಿಣಿ ನಟನೆಯ ‘ಟೆರರಿಸ್ಟ್’ ಚಿತ್ರದ ಟ್ರೇಲರ್ ಸೆ.2 ರಂದು ಬಿಡುಗಡೆ ಆಗುತ್ತಿದೆ.

Add Asianetnews Kannada as a Preferred SourcegooglePreferred

7.1 ಸೌಂಡ್ ಕ್ವಾಲಿಟಿಯಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರವೊಂದರಲ್ಲಿ ಅಂತಾರಾಷ್ಟ್ರೀಯ ತಾಂತ್ರಿಕ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ ಚಿತ್ರದ ನಿರ್ದೇಶಕ ಪಿ ಸಿ ಶೇಖರ್. ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುನೀತ್‌ರಾಜ್‌ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ಜಂಟಿಯಾಗಿ ಚಿತ್ರದ ಟ್ರೇಲರ್ ಅನಾವರಣ ಮಾಡುತ್ತಿದ್ದಾರೆ.

‘ಕನ್ನಡದಲ್ಲಿ 7.1 ಸೌಂಡ್ ಕ್ವಾಲಿಟಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಟೆರರಿಸ್ಟ್ ಸಿನಿಮಾ ತಾಂತ್ರಿಕವಾಗಿಯೂ ಬೇರೆ ಭಾಷೆಗಳ ಜತೆ ಸ್ಪರ್ಧೆಗಿಳಿಯಬೇಕು. ಆ ಕಾರಣಕ್ಕೆ ಅದ್ದೂರಿ ಮೇಕಿಂಗ್‌ನಂತೆಯೇ ತಾಂತ್ರಿಕ ಗುಣಮಟ್ಟದ ಕಡೆಗೆ ಗಮನ ಕೊಟ್ಟಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಪಿ ಸಿ ಶೇಖರ್.