ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಹೈ ಪ್ರೊಫೈಲ್ ಹೀರೋ ಈ ಕ್ಲಾಸ್ ಹೀರೋನ ಸಕ್ಸಸ್ ಹಿಂದಿರುವ ಸಿಕ್ರೇಟ್ ಅಂದರೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್.ಸದ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಿರುತೆರೆಯಿಂದ ಹಿರುತೆರೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಬೆಂಗಳೂರು (ಸೆ.21): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಹೈ ಪ್ರೊಫೈಲ್ ಹೀರೋ ಈ ಕ್ಲಾಸ್ ಹೀರೋನ ಸಕ್ಸಸ್ ಹಿಂದಿರುವ ಸಿಕ್ರೇಟ್ ಅಂದರೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್.ಸದ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಿರುತೆರೆಯಿಂದ ಹಿರುತೆರೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್ ನಂತರ ರಾಜ್ ಕುಟುಂಬದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಿನಿಮಾ ನಿರ್ಮಾಪಕಿಯಾಗುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಧಾರವಾಹಿವೊಂದನ್ನ ನಿರ್ಮಾಣ ಮಾಡುತ್ತಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಫಸ್ಟ್ ಟೈಮ್ ಕವಲು ದಾರಿ ಚಿತ್ರ ಮೂಲಕ ಸಿನಿಮಾ ನಿರ್ಮಾಪಕಿಯಾಗುತ್ತಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಚಿತ್ರ ಖ್ಯಾತಿಯ ಹೇಮಂತ್ ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. PRK ಪ್ರೊಡಕ್ಷನ್'ನಲ್ಲಿ ಕವಲುದಾರಿ ಅಲ್ಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಲಿದ್ದಾರೆ. ಈ ಬೆಳವಣಿಗೆ ನೋಡಿದರೆ ಪಾರ್ವತಮ್ಮ ರಾಜ್ ಕುಮಾರ್ ಜಾಗವನ್ನ ಅಶ್ವಿನಿ ಪುನೀತ್ ರಾಜ್ ಕುಮಾರ್ ತುಂಬುತ್ತಾರೆ ಎನ್ನಲಾಗುತ್ತಿದೆ.