ಮಂಡ್ಯ[ಫೆ.17] ಅಗಲಿದ ಯೋಧ ಗುರು ಅವರ  ಮನೆ ಮತ್ತು ಪತ್ನಿಯ ಪರಿಸ್ಥಿತಿಯನ್ನು ನೋಡಿ ಸಿನಿಮಾ ನಟಿ ಹರಿಪ್ರಿಯಾ ಕಣ್ಣೀರಾಗಿದ್ದಾರೆ. ಕಣ್ಣೀರು ಹಾಕುತ್ತಲೇ ಮಾತನಾಡಿದ ಹರಿಪ್ರಿಯಾ ಸಿನಿಮಾ ಶೂಟಿಂಗ್ ವೇಳೆ  ದೇಶದ ಗಡಿ ನೋಡಿದ್ದೇನೆ. ಗಡಿ ಕಾಯುವವರು ಸತ್ತಾಗ ನೋವಾಗುತ್ತೆ ಎಂದರು.

ನಮ್ಮಿಂದ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿ ಸ್ಥಿತಿ ನೋಡಲು ಆಗುತ್ತಿಲ್ಲ. ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯಪಟ್ಟಿದ್ದರು. ಇನ್ನು ದೇಶ ಕಾಯುವ ಯೋಧರ ತಾಯಂದಿರ ಪರಿಸ್ಥಿತಿ ಹೇಗಿರಬಹುದು? ಎಂದರು.

ಮಂಡ್ಯದ ಗಂಡುಗಲಿ ಗುರು ಜೀವನ ಸಾಧನೆ

ಪಾಕಿಸ್ತಾಕ್ಕೆ ಜೈಕಾರ ಕೂಗುವವರಿಗೆ ನಮ್ಮ ದೇಶದಲ್ಲಿ ಇರುವ ಅರ್ಹತೆ ಇಲ್ಲ. ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್ ಎಂದರು.