Asianet Suvarna News Asianet Suvarna News

ಪಾಕ್ ಕಲಾವಿದರಿಗೆ ಬಾಲಿವುಡ್ ನಿಷೇಧ, ಮೊದಲ ಅಸ್ತ್ರ ಪ್ರಯೋಗ

ಪುಲ್ವಾಮಾ ದಾಳಿ  ನಂತರ ಪಾಕಿಸ್ತಾನಕ್ಕೆ ಒಂದೊಂದೆ ಆತಂಕಗಳು ಶುರುವಾಗಿದೆ. ಬಾಲಿವುಡ್ ಪಾಕ್ ಕಲಾವಿದರಿಗೆ ನಿಷೇಧ ಹೇರಿತ್ತು. ಈಗ ಅದರ ಮೊದಲ ಹಂತ ಜಾರಿಗೆ ಸಿದ್ಧವಾಗಿದೆ.

Pulwama Attack Salman Khan s Bharat never had songs sung by Pakistani Singers
Author
Bengaluru, First Published Feb 19, 2019, 10:38 PM IST

ಮುಂಬೈ[ಫೆ.18]  ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಪಾಕ್​ ಕಲಾವಿದರಿಗೆ ನಿಷೇಧ ಹೇರಲಾಗಿದ್ದು ಬಾಲಿವುಡ್ ಅಭಿಮಾನಿಗಳ ಒತ್ತಾಯವೂ ಕೇಳಿ ಬಂದ ನಂತರ ಸಲ್ಮಾನ್​ ಖಾನ್​ ಮೊದಲ ಹೆಜ್ಜೆ ಇಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ತಮ್ಮ  'ನೋಟ್​ಬುಕ್'​ ಹಾಗೂ 'ಭಾರತ್'​​ ಚಿತ್ರದಲ್ಲಿಯ ಸಾಂಗ್​ ರೀ-ರೆಕಾರ್ಡಿಂಗ್‌ನಲ್ಲಿ ಪಾಕ್ ಕಲಾವಿದರನ್ನು ಬಳಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಎರಡು ಚಿತ್ರಗಳಲ್ಲಿಯ ಒಂದೊಂದು ಹಾಡಿಗೆ  ಪಾಕ್​ ಗಾಯಕ ಅತಿಫ್​ ಅಸ್ಲಾಮ್​ ಹಾಗೂ ರಹಾತ್​ ಫತೇಶ್​​ ಅಲಿ ಖಾನ್ ಧ್ವನಿ ನೀಡಿದ್ದಾರೆ. ನಿನ್ನೆಯಷ್ಟೆ ಪಾಕ್​ ಕಲಾವಿದರಿಗೆ ಬಾಲಿವುಡ್​ ಬ್ಯಾನ್ ಮಾಡಿದ್ದಕ್ಕೆ ಈ ಹಾಡುಗಳನ್ನು ಮರು ರೆಕಾರ್ಡಿಂಗ್ ಮಾಡಲು ಸಲ್ಮಾನ್ ನಿರ್ಧಾರ ಮಾಡಿದ್ದಾರೆ.

ಸುದ್ದಿಯನ್ನು ಅಧಿಕೃತವಾಗಿ ಪ್ರಕಟಮಾಡಿಲ್ಲವಾದರೂ ಸಲ್ಲು ಈ ಹೆಜ್ಜೆ ಇಡಲು ಸಿದ್ಧರಾಗಿರುವುದನ್ನು ಅವರ ಆಪ್ತ ವಲಯ ಹೇಳಿದೆ. ಒಟ್ಟಿನಲ್ಲಿ ಬಾಲಿವುಡ್ ತೆಗೆದುಕೊಂಡ ನಿರ್ಧಾರ ಪಾಕ್ ಕಲಾವಿದರ ಮೇಲೆ ಪರಿಣಾಮ ಬೀರುವುದೆಂತೂ ಸುಳ್ಳಲ್ಲ.

Follow Us:
Download App:
  • android
  • ios