ಬೆಂಗಳೂರು (ಡಿ. 05): ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ನಟ ಸುಮಂತ್ ಶೈಲೇಂದ್ರ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. 

ಬೆಂಗಳೂರಿನ ಕೋರಮಂಗಲ ನಿವಾಸಿ ಶ್ರೀನಿವಾಸ ನಾರಪ್ಪ ಹಾಗೂ ಚಂದ್ರಕಲಾ ದಂಪತಿಯ ಪುತ್ರಿ ಅನಿತಾ ಅವರನ್ನು ಸುಮಂತ್ ಬಾಳಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಡಿಸೆಂಬರ್ 12 ರಂದು ಬುಧವಾರ ಬೆಂಗಳೂರಿನ ಅರಮನೆ ಆವರಣದಲ್ಲಿರುವ ಮೇನ್ ಪ್ಯಾಲೇಸ್ ನಲ್ಲಿ ಈ ಜೋಡಿಯ ವಿವಾಹೋತ್ಸವ ನಡೆಯುತ್ತಿದೆ. ಆರತಕ್ಷತೆ ಕಾರ್ಯಕ್ರಮ ಡಿಸೆಂಬರ್ 11 ರಂದು ಸಂಜೆ 7 ಗಂಟೆಗೆ ಫಿಕ್ಸ್ ಆಗಿದೆ.

ಕನ್ನಡದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾದ ಶೈಲೇಂದ್ರ ಬಾಬು ಗಂಡ ಹೆಂಡತಿ, ಗೌರಮ್ಮ , ದುಬೈ ಬಾಬು ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಪುತ್ರ ಸುಮಂತ್ ಕೂಡ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಯಾದರಲ್ಲದೆ, ಅವರದೇ ಬ್ಯಾನರ್‌ನಲ್ಲಿ ‘ದಿಲ್‌ವಾಲ’, ‘ಭಲೇ ಜೋಡಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ಒಂದು ಚಿತ್ರಕ್ಕೆ ನಾಯಕರಾಗಿ ಬಣ್ಣ ಹಚ್ಚಿರುವುದು ವಿಶೇಷ.