ಮೈಸೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಸ್ಥಾಪನೆಯಾಗುವುದು ಖಚಿತ ಎಂದು ನಟ ವಿಷ್ಣುವರ್ಧನ್ ಅಳಿಯ ಅನಿರುದ್ಧ ತಿಳಿಸಿದ್ದಾರೆ. 

ನಗರದಲ್ಲಿ ನಡೆದ ‘ಹೆಜ್ಜೆ- ಗೆಜ್ಜೆ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ’ಯಲ್ಲಿ ಮಾತನಾಡಿದ ಅವರು, ನಾನು ಕಾರ್ಯಕ್ರಮಕ್ಕೆ ಆಗಮಿಸುವಾಗ ಆಪ್ತಮಿತ್ರ ಚಿತ್ರದ ಗೀತೆ, ವಿಡಿಯೋವನ್ನು ಪ್ರದರ್ಶಿಸಿದ್ದು ಅಪ್ಪಾಜಿ ನೆನಪು ತರಿಸಿತು. 

ಇಲ್ಲಿನ ಅಭಿಮಾನಿಗಳು ಸ್ಮಾರಕದ ಬಗ್ಗೆ ವಿಚಾರಿಸಿದ್ದಾರೆ. ಖಂಡಿತಾ ಮೈಸೂರಿನಲ್ಲಿ ಸ್ಮಾರಕ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.