ಬೆಂಗಳೂರು (ಜು. 31): ಪ್ರಿಯಾಂಕಾ ಉಪೇಂದ್ರ ಅಭಿನಯ ಹಾಗೂ ಲೋಹಿತ್‌ ನಿರ್ದೇಶನದ ‘ದೇವಕಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆ ಆಗಿ ಈ ಚಿತ್ರವೀಗ 25 ದಿನ ಪೂರೈಸುತ್ತಿದೆ.

ಚಿತ್ರ ವಿಮರ್ಶೆ: ದೇವಕಿ

ಈ ಹೊತ್ತಲ್ಲಿ ಚಿತ್ರತಂಡ ಚಿತ್ರವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆಗಸ್ಟ್‌ 4 ರಂದು ಈ ಚಿತ್ರ ಸಿಂಗಾಪುರದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಅಲ್ಲಿಯೇ ಈ ಚಿತ್ರದ ಪ್ರಥಮ ಅಂತಾರಾಷ್ಟ್ರೀಯ ಪ್ರದರ್ಶನ ನಡೆಯಲಿದ್ದು, ಅದರಲ್ಲಿ ಚಿತ್ರದ ನಾಯಕಿ ಪ್ರಿಯಾಂಕಾ ಉಪೇಂದ್ರ ಪಾಲ್ಗೊಳ್ಳುತ್ತಿದ್ದಾರೆ.