ಮದುವೆಯ ಹೊಸ್ತಿಲಲ್ಲಿರುವ ಪ್ರಿಯಾಂಕಾ ಛೋಪ್ರಾ  ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಅಷ್ಟೆ ಮಾಡಿದ್ದರೆ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಪ್ರಿಯಾಂಕಾ ಧರಿಸಿದ್ದ ಆಭರಣ ಮೌಲ್ಯದ ಲೆಕ್ಕಾಚಾರ ಮಾತ್ರ!

ಮುಂಬೈ[ಅ.30] ಪ್ರಿಯಾಂಕಾ ಛೋಪ್ರಾ ಕುಣಿದು ಕುಪ್ಪಳಿಸಿರುವ ದೃಶ್ಯ ಫುಲ್ ವೈರಲ್ ಆಗಿದೆ. ತನ್ನ 100 ಜನ ಖಾಸಾ ಗೆಳತಿಯರೊಂದಿಗೆ ಪ್ರಿಯಾಂಕಾ ಪಾರ್ಟಿ ಮಾಡಿ ಮುಗಿಸಿದ್ದಾರೆ. ಕುಣಿಯುವ ವೇಳೆ ಪ್ರಿಯಾಂಕಾ ಧರಿಸಿದ್ದ ಆಭರಣದ ಮೌಲ್ಯ ಬರೋಬ್ಬರಿ 7.35 ಕೋಟಿ ರೂ.!

ಎಂಗೇಜ್ ಮೆಂಟ್ ವೇಳೆ ಹಾಕಿಕೊಂಡಿದ್ದ 2.1 ಕೋಟಿ ರೂ. ಮೌಲ್ಯದ ರಿಂಗ್ ಈ ಲೆಕ್ಕದಲ್ಲಿ ಸಿಕ್ಕಿಲ್ಲ. ಒಟ್ಟು 10 ಕೋಟಿ ರೂ. ಮೌಲ್ಯದ ಆಭರಣ ಹೊತ್ತು ಪ್ರಿಯಾಂಕಾ ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.

View post on Instagram
View post on Instagram