ಮೈಬಣ್ಣ ಕಂದು ಎಂದು ಚಿತ್ರದ ಅವಕಾಶ ತಪ್ಪಿತ್ತು: ಪ್ರಿಯಾಂಕಾ ಬಹಿರಂಗ!

First Published 12, Apr 2018, 10:43 AM IST
Priyanka Chopra turned down for Movie Role because of Skin colour
Highlights

ನಟ ನಟಿಯರನ್ನು ಮೈ ಬಣ್ಣದಿಂದ ಅಳೆಯುವುದು ಹೊಸದೇನಲ್ಲ. ಆದರೆ ಇದೇ ಕಾರಣಕ್ಕಾಗಿ ತಮಗೆ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಕೈತಪ್ಪಿತ್ತು ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ನವದೆಹಲಿ: ನಟ ನಟಿಯರನ್ನು ಮೈ ಬಣ್ಣದಿಂದ ಅಳೆಯುವುದು ಹೊಸದೇನಲ್ಲ. ಆದರೆ ಇದೇ ಕಾರಣಕ್ಕಾಗಿ ತಮಗೆ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಕೈತಪ್ಪಿತ್ತು ಎಂದು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

ಈ ಮೂಲಕ ತಾವು ಕೂಡಾ ಜನಾಂಗೀಯ ತಾರತಮ್ಯಕ್ಕೆ ತುತ್ತಾಗಿದ್ದಾಗಿ ಬಹಿರಂಗಪಡಿಸಿದ್ದಾರೆ. ಇನ್‌ಸ್ಟೈಲ್‌ ಮ್ಯಾಗಜೀನ್‌ಗೆ ಸಂದರ್ಶನ ನೀಡಿರುವ ಪ್ರಿಯಾಂಕಾ, ‘ನನಗೆ ಚಿತ್ರವೊಂದರಲ್ಲಿ ನಟಿಸಲು ಆಹ್ವಾನ ನೀಡಲಾಗಿತ್ತು.

ಆದರೆ ಬಳಿಕ ಏಕಾಏಕಿ ನನ್ನ ಏಜೆಂಟ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬರು, ಅವಕಾಶ ನಿರಾಕರಿಸಿದರು. ಆಗ, ನಾನು ದಪ್ಪವಾಗಿದ್ದೇನಾ. ಇನ್ನೂ ಸಣ್ಣಗೆ ಕಾಣಬೇಕಾ. ನನ್ನ ಮೈಮಾಟದ ಸೌಂದರ್ಯ ಮತ್ತಷ್ಟುಹೆಚ್ಚಿಸಿಕೊಳ್ಳಬೇಕಾ ಎಂದು ಕೇಳಿದ್ದೆ.

ಆದರೆ, ನನ್ನ ಕಂದು ಮೈಬಣ್ಣದ ಕಾರಣದಿಂದಾಗಿ ಅವಕಾಶ ನಿರಾಕರಿಸಲಾಗಿದೆ ಎಂಬುದನ್ನು ಅವರು ತಿಳಿಸಿದರು’ ಎಂದು ಬಹಿರಂಗಪಡಿಸಿದ್ದಾರೆ. ಆದರೆ, ಇಂಥ ಜನಾಂಗೀಯ ನಿಂದನೆ ಬಾಲಿವುಡ್‌ ಅಥವಾ ಹಾಲಿವುಡ್‌ನಲ್ಲಾಯಿತೇ ಎಂಬುದರ ಬಗ್ಗೆ ನಟಿ ಸ್ಪಷ್ಟನೆ ನೀಡಿಲ್ಲ.

loader