ಅಮೆರಿಕನ್ ವೆಬ್ ಸೀರೀಸ್ ಕ್ವಾಂಟಿಕೋ ಮೂಲಕ ಪ್ರಿಯಾಂಕ ಚೋಪ್ರಾ ಹಾಲಿವುಡ್‌ಗೆ ಹಾರಿದ್ದರು. ಈಗ ಕ್ವಾಂಟಿಕೋ ಸೀರೀಸ್ ಮುಕ್ತಾಯಗೊಂಡಿದೆ. ಕ್ವಾಂಟಿಕೋ ಪ್ರಿಯಾಂಕ ಚೋಪ್ರಾಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು.
ಮುಂಬೈ (ಆ. 04): ಜಾಗತಿಕ ಮಟ್ಟದಲ್ಲಿ ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಖ್ಯಾತಿ ಹೆಚ್ಚಿಸಿದ ಅಮೆರಿಕನ್ ವೆಬ್ ಸೀರೀಸ್ ಕ್ವಾಂಟಿಕೋ ಮುಕ್ತಾಯಗೊಂಡಿದೆ. ಕ್ವಾಂಟಿಕೋ ಸೀಸನ್ 3 ಮುಕ್ತಾಯಗೊಂಡಿದ್ದು ಇದನ್ನು ಮುಂದುವರೆಸಲು ಎಬಿಸಿ ನೆಟ್ ವರ್ಕ್ ನಿರಾಕರಿಸಿದೆ.
ಕ್ವಾಂಟಿಕೋ ಅನುಭವವನ್ನು ಪ್ರಿಯಾಂಕ ಚೋಪ್ರಾ ಹಂಚಿಕೊಂಡಿದ್ದಾರೆ. ಕ್ವಾಂಟಿಕೋ ಸೀಸನ್ ಮುಕ್ತಾಯಗೊಂಡಿದೆ. ನಾನು, ಅಲೆಕ್ಸ್ ಪರೀಶ್ ಗೆ ಗುಡ್ ಬೈ ಹೇಳುತ್ತಿದ್ದೇನೆ. ಆಕೆಯ ಕಥೆ ಸಂಪೂರ್ಣವಾಗಿ ನೀವು ತೆರೆ ಮೇಲೆ ನೋಡಲಿದ್ದೀರಿ. ಇದು ಒಬ್ಬ ಕಲಾವಿದನಿಗೆ ಸಾರ್ಥಕ ಭಾವ ಕೊಡುತ್ತದೆ. ಅಲೆಕ್ಸ್ ಕಥೆಯನ್ನು ತೆರೆ ಮೇಲೆ ಸವಾಲಾಗಿತ್ತು. ನನಗೆ ದೈಹಿಕವಾಗಿ, ಮಾನಸಿಕವಾಗಿ ಚಾಲೆಂಜ್ ಇತ್ತು. ನನ್ನ ಅಭಿನಯ ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ಪಿಗ್ಗಿ ಎಮೋಶನಲ್ ಆಗಿ ಬರೆದುಕೊಂಡಿದ್ದಾರೆ.
ಕ್ವಾಂಟಿಕೋ ತಮ್ಮ ಜೀವನದ ಮೇಲೂ ಹೇಗೆ ಪ್ರಭಾವ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಮನೆ, ಮನಗಳಲ್ಲಿ ನನಗೆ ಜಾಗ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇದೊಂದು ಅದ್ಭುತ ಅನುಭವ. ಕ್ವಾಂಟಿಕೋ ಟೀಂ ಜೊತೆ ಕೆಲಸ ಮಾಡಿದ್ದು ಸಖತ್ ಖುಷಿ ಕೊಟ್ಟಿದೆ. ಹೊಸ ಸಂಗತಿಗಳನ್ನು ಕಲಿತ್ತಿದ್ದೇನೆ. ಹೊಸ ಫ್ರೆಂಡ್ಸ್ ಸಿಕ್ಕಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.
