ಟೈಟ್ ಡ್ರೆಸ್ ಧರಿಸುವ ವಿಚಾರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ತಂದೆಯ ನಡುವೆ ವಾಗ್ವಾದ ನಡೆದಿದ್ದಂತೆ. ಸ್ವತಃ ಪ್ರಿಯಾಂಕಾ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಮುಂಬೈ(ಏ. 03)   ಬಾಲಿವುಡ್ ನಲ್ಲಿ ಮಿಂಚಿ ಅಂತಾರಾಷ್ಟ್ರೀಯ ಗಾಯಕ ನಿಕ್ ಜೋನಾಸ್ ಮದುವೆಯಾದ ಪ್ರಿಯಾಂಕಾ ಚೋಪ್ರಾ ತಮ್ಮ 16ನೇ ವಯಸ್ಸಿನ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ. 

ನೀನು ಬಿಗಿಯಾದ ವಸ್ತ್ರ ಧರಿಸಬೇಡ ಎಂದು ಪ್ರಿಯಾಂಕಾ ತಂದೆ ಹೇಳಿದ್ದರಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ ಅದಕ್ಕೆ ಕಾರಣವನ್ನು ನೀಡಿದ್ದಾರೆ.

ಮದುವೆಯಾದ ಮೇಲೆ ಪ್ರಿಯಾಂಕಾ ವೇಷ್ ನೋಡಿರಣ್ಣ, ಸೌಂದರ್ಯ ಅನಾವರಣ!

ಯುಎಸ್ ನಲ್ಲಿ ಶಾಲೆಗೆ ತೆರಳುತ್ತಿದ್ದ ಪ್ರಿಯಾಂಕಾ ಎಂದಿನಂತೆ ಮನೆಗೆ ವಾಪಸ್ ಆಗುತ್ತಿದ್ದರಂತೆ. ಡ್ರೆಸ್ ಧರಿಸುವ ವಿಚಾರದಲ್ಲಿ ನನಗೂ ಮತ್ತು ನನ್ನ ತಂದೆಗೂ ಇಗೋ ಕ್ಲಾಶ್ ಆಗಿತ್ತು ಎಂದು ಹೇಳಿದ್ದಾರೆ.

12ನೇ ವಯಸ್ಸಿನಲ್ಲಿ ಶಾಲೆಗೆ ಹೋಗುವಾಗ ಗುಂಗುರು ಕೂದಲಿನ ಸಾದಾ ಸೀದಾ ಹುಡುಗಿಯಾಗಿದ್ದೆ. 16ನೇ ವಯಸ್ಸಿಗೆ ತಿರುಗಿದಾಗ ನಿಸರ್ಗದತ್ತ ಬದಲಾವಣೆ ನನ್ನಲ್ಲಿಯೂ ಆದವು. ನೀಧಾನವಾಗಿ ಮಹೀಲೆಯಾಗಿ ಬದಲಾಗುತ್ತಿದ್ದೆ. ಈ ವೇಳೆ ಕೆಲ ವಾರ ನನ್ನ ಬಗ್ಗೆ ನನ್ನ ತಂದೆಗೆ ಏನು ಮಾಡಬೇಕು ಎಂಬುದೇ ತೋಚಲಿಲ್ಲ.  ಕೆಲ ಹುಡುಗರು ನನ್ನನ್ನು ಹಿಂಬಾಲಿಸಿಕೊಂಡು ಮನೆವರೆಗೂ ಬರುತ್ತಿದ್ದರು.  ಇದೇ ವೇಳೆ ಟೈಟ್ ಡ್ರೆಸ್ ಬ್ಯಾನ್ ಮಾಡುವ ವಿಚಾರ ತೆರೆದುಕೊಂಡಿತು ಎಂದು ತಿಳಿಸಿದ್ದಾರೆ. 

ಪ್ರಿಯಾಂಕಾ ಅವರ ತಂದೆ ಅಶೋಕ್ ಚೋಪ್ರಾ 2013ರಲ್ಲಿ ಲಿವರ್ ಕ್ಯಾನ್ಸರ್‌ನಿಂದ ನಿಧನರಾದರು. ಇನ್ನು ಚಿಕ್ಕಂದಿನಲ್ಲಿ ಪ್ರಿಯಾಂಕಾ ಶಿಕ್ಷಣ ಪಡೆಯಲು ಅಮೆರಿಕವನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆಯೂ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ.

ಅಲ್ಲಿನ ಹೈಸ್ಕೂಲ್ಸ್‌ನಲ್ಲಿ ಓದಬೇಕು ಎಂಬ ಬಯಕೆ ಮೊದಲಿಂದಲೂ ನನಗಿತ್ತು.  ಅದೇ ಕಾರಣಕ್ಕೆ ಆಯ್ಕೆ ಮಾಡಿಕೊಂಡಿದ್ದೆ. ಬಾಲಕಿಯರಿಗೆ ಅಲ್ಲಿ ಮುಕ್ತ ಸ್ವಾತಂತ್ರ್ಯ ಇತ್ತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪ್ರತಿ ಸಲವೂ ಸುದ್ದಿಗೆ ಗ್ರಾಸವಾಗುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಧರಿಸಿದ್ದ ಉಡುಪು ಸಿಕ್ಕಾಪಟ್ಟೆ ಟ್ರೋಲ್ ಗುರಿಯಾಗಿತ್ತು.