ನನಗೂ ಅಸ್ತಮಾ ಇದೆ ಎಂದು ಒಪ್ಪಿಕೊಂಡ ಪ್ರಿಯಾಂಕ ಚೋಪ್ರಾ | ನನ್ನ ಸಾಧನೆಗೆ ಅಸ್ತಮಾ ಅಡ್ಡ ಬರುವುದಿಲ್ಲ ಎಂದ ಪಿಗ್ಗಿ | ಅಸ್ತಮಾ ರೋಗಿಗಳಿಗೆ ಧೈರ್ಯ ತುಂಬಿದ ಪಿಗ್ಗಿ
ಬೆಂಗಳೂರು (ಸೆ. 20): ಇತ್ತೀಚಿಗೆ ಅಸ್ತಮಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಹೇಳಿಕೊಳ್ಳಲು ಹಿಂಜರೆಯುತ್ತಾರೆ. ಇನ್ನು ಕೆಲವರು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ತಮಗೂ ಅಸ್ತಮಾ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ನನಗೂ ಅಸ್ತಮಾ ಇದೆ. ಅದರಲ್ಲಿ ಮುಚ್ಚಿಡುವಂತದ್ದು ಏನಿದೆ? ಅದು ನನ್ನನ್ನು ಕಂಟ್ರೋಲ್ ಮಾಡುವ ಮುನ್ನ ನಾನೇ ಅದನ್ನು ಕಂಟ್ರೋಲ್ ಮಾಡುತ್ತೇನೆ. ನನ್ನ ಗುರಿ-ಸಾಧನೆಗೆ ಅಡ್ಡ ಬರಲು ಸಾಧ್ಯವಿಲ್ಲ. ಬಿ ರಾಕ್ ಜಿಂದಗಿ ಎಂದು ಅಸ್ತಮಾ ರೋಗಿಗಳಿಗೆ ಧೈರ್ಯ ತುಂಬಿದ್ದಾರೆ.
