ನವದೆಹಲಿ (ಡಿ. 13): ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮದುವೆಯೆಲ್ಲಾ ಮುಗಿದು ಹನಿಮೂನ್ ಮೂಡ್ ನಲ್ಲಿದ್ದಾರೆ. 

ಹನಿಮೂನ್ ಗಾಗಿ ಓಮನ್ ಗೆ ಹಾರಿದ್ದು, ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಅಲ್ಲಿನ ಖಾಸಗಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Marital bliss they say.. 😍❤️💋

A post shared by Priyanka Chopra Jonas (@priyankachopra) on Dec 10, 2018 at 11:44pm PST

ಮದುವೆಯಾಗಿದ್ದೇ ಆಗಿದ್ದು; ಪ್ರಿಯಾಂಕ ಚೋಪ್ರಾ ಹೆಸರೇ ಚೆಂಜ್ !

ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಿಕ್ ಜೋನ್ಸ್, ಪ್ರಿಯಾಂಕ ಚೋಪ್ರಾ. ಜೋಧಪುರ ಅರಮನೆಯಲ್ಲಿ ಅದ್ದೂರಿಯಾಗಿ ವಿವಾಹ ನಡೆಯಿತು. 

ಕ್ರೈಸ್ತ ಶೈಲಿಯಲ್ಲಿ ಮದುವೆಯಾದ ದಿನ ಜೋಧ್‌ಪುರ ಅರಮನೆ ಬಳಿ ಭಾರೀ ಪಟಾಕಿ ಸಿಡಿಸಲಾಗಿತ್ತು. ಇದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಕಾರಣ, ಅಸ್ತಮಾ ರೋಗಿಗಳ ಪರ ಔಷಧ ತಯಾರಿಸುವ ಕಂಪನಿಯೊಂದ ಜಾಹೀರಾತಿನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ, ಪಟಾಕಿ ಸಿಡಿತದಿಂದ ಅಸ್ತಮಾ ಹೆಚ್ಚಾಗುತ್ತದೆ. ಹೀಗಾಗಿ ದೀಪಾವಳಿಯಲ್ಲಿ ದೀಪದಿಂದ ಮಾತ್ರ ಆರಿಸೋಣ ಎಂದು ಕರೆ ನೀಡಿದ್ದರು.