ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ.ಪಾತ್ರಕ್ಕಾಗಿ ಏನು ಬೇಕಾದ್ರೂ ಮಾಡುವ ಪ್ರಿಯಾಂಕ ಚೋಪ್ರ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ನವದೆಹಲಿ(ಸೆ.11): ಬಾಲಿವುಡ್'ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಸದ್ಯ ವಿದೇಶಿ ಗರ್ಲ್ ಆಗಿ ಹಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.ಪಾತ್ರಕ್ಕಾಗಿ ಏನು ಬೇಕಾದ್ರೂ ಮಾಡುವ ಪ್ರಿಯಾಂಕ ಚೋಪ್ರ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಪ್ರಿಯಾಂಕ ಚೋಪ್ರಾ ಬೋಲ್ಡ್ ಆ್ಯಕ್ಟಿಂಗ್ ಜೊತೆಗೆ ತನ್ನ ಮೈಮಾಟದಿಂದಲೇ ಬಾಲಿವುಡ್ ಹಾಗೂ ಹಾಲಿವುಡ್'ನಲ್ಲಿ ಮೋಡಿ ಮಾಡುತ್ತಿರುವ ಗ್ಲ್ಯಾಮರ್ ಡಾಲ್. ವಿಭಿನ್ನ ಪಾತ್ರಗಳಿಂದಲೇ ಹಾಲಿವುಡ್'ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ಪಿಗ್ಗಿ, ಹಾಲಿವುಡ್ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ.
ಕ್ವಾಂಟಿಕೋ ಹಾಗೂ ಬೇವಾಚ್ ಸಿನಿಮಾದಿಂದ ಹಾಲಿವುಡ್'ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಪ್ರಿಯಾಂಕ ಚೋಪ್ರಾ, "ಈಸಂಟ್ ಇಟ್ ರೊಮ್ಯಾಂಟಿಕ್ "ಎಂಬ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾದ ಪ್ರಿಯಾಂಕ ಚೋಪ್ರಾ ಯೋಗಾ ಟೀಚರ್. ಈ ಚಿತ್ರದ ಒಂದು ದೃಶ್ಯದಲ್ಲಿ ಪಿಗ್ಗಿ ಸಿಕ್ಸ್ ಪ್ಯಾಕ್ ಮಾಡಿರೋ ದೇಹವನ್ನ ಪ್ರದರ್ಶನ ಮಾಡುವ ಸನ್ನಿವೇಶವಿದೆ. ಅದಕ್ಕಾಗಿ ಪ್ರಿಯಾಂಕ ಚೋಪ್ರಾ ಸಿಕ್ಸ್ ಪ್ಯಾಕ್ ಮಾಡುತ್ತಿದ್ದಾರೆ.
