ಪ್ರಿಯಾಂಕ ಚೋಪ್ರಾ ತೆಳ್ಳಗೆ ಬೆಳ್ಳಗೆ ಹಿಂದಿರುವ ಗುಟ್ಟೇನು ಗೊತ್ತಾ?

First Published 23, Jul 2018, 5:28 PM IST
Priyanka Chopra Beauty secret
Highlights

ಪ್ರಿಯಾಂಕ ಚೋಪ್ರಾ ಮೊನ್ನೆ ಮೊನ್ನೆಯಷ್ಟೇ 36 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವಯಸ್ಸಾಗುತ್ತಾ ಬಂದರೂ ಇನ್ನೂ ಬಳಕುವ ಬಳ್ಳಿಯಂತಿದ್ದಾರೆ. ದಿನದಿಂದ ದಿನಕ್ಕೆ ಸ್ಲಿಮ್ ಆಗಿ ಚಂದ ಕಾಣಿಸುತ್ತಿದ್ದಾರೆ ಪ್ರಿಯಾಂಕ. ಅವರ ಬ್ಯೂಟಿ ಸೀಕ್ರೇಟ್ ಏನು? ಡಯಟ್ ಮಂತ್ರವೇನು? ಏನೆಲ್ಲಾ ಮಾಡ್ತಾರೆ? ನೋಡಿ. 

ಕ್ವಾಂಟಿಕೊ ಗರ್ಲ್  ಪ್ರಿಯಾಂಕ ಚೋಪ್ರಾ ಕಳೆದ ವಾರವಷ್ಟೇ ತಮ್ಮ 36 ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡರು. ಊಟ, ತಿಂಡಿ ವಿಷಯದಲ್ಲೆಲ್ಲ ಧಾರಾಳಿಯಾಗಿರು ಈ ಪಂಜಾಬಿ ಬೆಡಗಿಗೆ ಜಿಮ್‌ನಲ್ಲಿ ಬೆವರು ಹರಿಸೋದರ ಬಗ್ಗೆಯೂ ಅಷ್ಟೊಂದು ಒಲವಿಲ್ಲ. ಮತ್ತೆ ಹೇಗೆ ಆ ಪರಿ ಫಿಟ್‌ನೆಸ್ ಮೇಂಟೇನ್ ಮಾಡಿದ್ದಾರೆ? ಇಲ್ಲಿದೆ ಸೀಕ್ರೆಟ್ಸ್

ತಿಂಡಿಪೋತಿ ಪಿಗ್ಗೀ ‘ನಾನು ಮಹಾ ತಿಂಡಿಪೋತಿ. ನಾನು ತಿನ್ನೋದಕ್ಕೂ, ನನ್ನ ದೇಹ ಫಿಟ್ ಆಗಿರೋದಕ್ಕೂ ಯಾವ ಸಂಬಂಧನೂ ಇಲ್ಲ. ಹೊಟ್ಟೆ ದೇವ್ರಿಗೆ ಈವರೆಗೆ ಯಾವತ್ತೂ ಮೋಸ ಮಾಡಿಲ್ಲ. ಚೆನ್ನಾಗಿ ತಿಂತೀನಿ.’ ಇದು
ಪ್ರಿಯಾಂಕ ಚೋಪ್ರಾ ಪಬ್ಲಿಕ್ ಆಗಿ ಹೇಳಿರೋ ಮಾತು.

ಬಾಲಿವುಡ್ನಲ್ಲಿದ್ದಾಗಲೂ ಅಷ್ಟೇ, ಹಾಲಿವುಡ್‌ಗೆ ಹೋದ ಮೇಲೂ ಅಷ್ಟೇ. ಇವರ ಡಯೆಟ್ನಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಇದಕ್ಕೆ ಕಾರಣ ಮೆಟಬಾಲಿಕ್ ರೇಟ್ ಚೆನ್ನಾಗಿರೋದು. ಬೆಳಗ್ಗೆ ಎಗ್‌ವೈಟ್, ಓಟ್ ಮೀಲ್ ತಿನ್ನೋ ಪಿಗ್ಗೀ, ಮಧ್ಯಾಹ್ನ ದಾಲ್ ಊಟ ಮತ್ತು ತರಕಾರಿ ತಿನ್ನೋಕೆ ಇಷ್ಟಪಡುತ್ತಾರೆ. ಅಂದಹಾಗೆ ಬಟರ್ ಪರಾಠಾ, ಮಟನ್ ಬಿರಿಯಾನಿ ಪಿಗ್ಗೀ ಫೇವರೆಟ್. ದಿನವಡೀ ನೀರು ಕುಡಿತಾನೇ ಇರ‌್ತಾರೆ. ಎಷ್ಟು ಬೇಕೋ ಅಷ್ಟೇ ವರ್ಕೌಟ್ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರಿಳಿಸೋದು ಈಕೆಗೆ ದೊಡ್ಡ ತಲೆನೋವು. ಸಾಧ್ಯವಾದಷ್ಟೂ ಜಿಮ್ ಅವಾಯ್ಡ್ ಮಾಡೋ ಈಕೆ, ಯೋಗ, ಕಿಕ್ ಬಾಕ್ಸಿಂಗ್ ಮೊದಲಾದ ವ್ಯಾಯಾಮಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಹದಿನೈದು ನಿಮಿಷ ಟ್ರೆಡ್‌ಮಿಲ್‌ನಲ್ಲಿ ಓಡೋದನ್ನು ಮಿಸ್ ಮಾಡಲ್ಲ.

loader