ಲಾಸ್ ಏಂಜಲೀಸ್ (ಸೆ.15): ಅಮೆರಿಕಾದ ಜನಪ್ರಿಯ ಧಾರಾವಾಹಿ ಕ್ವಾಂಟಿಕೋದಲ್ಲಿ ನಟಿಸಿದ ನಂತರ ಭಾರತೀಯ ನಟಿಯರಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಐದು ವರ್ಷಗಳಲ್ಲಿ ಅಮೆರಿಕಾದ ನಟಿ ಸೋಫಿಯಾ ವರ್ಗಾರ ಮೊದಲ ಸ್ಥಾನದಲ್ಲಿದ್ದರೆ ಪ್ರಿಯಾಂಕ ಇದೀಗ 8 ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕ 11 ಮಿಲಿಯನ್ ಸಂಪಾದಿಸುತ್ತಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಮಟ್ಟದ ಧಾರಾವಾಹಿ ಕ್ವಾಂಟಿಕೊ ದಲ್ಲಿ ನಟಿಸಿ ಆ ಮೂಲಕ ಹಾಲಿವುಡ್ ಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ನಟಿ ಎನಿಸಿಕೊಂಡಿದ್ದಾರೆ.

ಈಗ ಅತೀ ಹೆಚ್ಚು ಸಂಪಾದಿಸುವ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಪಿಂಕಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ.