ನಟ ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರು ಅಧಿಕೃತವಾಗಿ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಕಿಚ್ಚ ಕ್ರಿಯೇಷನ್ ಹೆಸರಿನಲ್ಲಿ ವಿಶೇಷವಾದ ಲೋಗೋದೊಂದಿಗೆ ರೂಪಿಸುವ ಈ ಯೂಟ್ಯೂಬ್ ಚಾನಲ್ ಅನ್ನು ಯುಗಾದಿ ಹಬ್ಬದ ಉಡುಗೊರೆಯಾಗಿ ತಮ್ಮ ಪತಿ ಸುದೀಪ್ ಅವರಿಗೆ ಅರ್ಪಿಸಿದ್ದಾರೆ. 

ಶ್ರೀಕೃಷ್ಣನನ್ನು ನೆನಪಿಸುವವಂತೆ ತುಂಬಾ ಭಿನ್ನವಾಗಿ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಅನ್ನು ಶುರು ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್‌ಗೆ ಸಂಬಂಧಿಸಿದ ಸಿನಿಮಾ ವಿಚಾರಗಳು ಇಲ್ಲಿ ದೊರೆಯಲಿವೆಯಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಜಾನುಬಾಹು ಆರಡಿಯ ಅಸ್ತ್ರ , ಸಿಂಹಕಂಠ ಬಿಲ್ಲನೋಟ, ಅಕಾಶ ಮುಟ್ಟಿದರೂ ಭೂಸ್ಪರ್ಶ ಬಿಡದೇ ಆಡುವನಿವನಾಟ, ಸದ್ದಿಲ್ಲದೆ ಕತ್ತಲ ಬೆಳಗುವದೀಪದಂಚಿನ ಕಪ್ಪು ಇವನ ಮೌನ, ಕಪ್ಪಾದರೂ ಜಗಕೇ ಬೆಳಕನೀವ ಪರಮ ಸುದೀಪನು, ಕೃಷ್ಣ... ಇಂಥ ಸಾಲುಗಳೊಂದಿಗೆ ಶ್ರೀಕೃಷ್ಣನ ಶಂಖದ ಹಿನ್ನೆಲೆ ಧ್ವನಿಯಾಗಿ ಆ ಧ್ವನಿಯ ಮುನ್ನಲೆಯಲ್ಲಿ ಕಿಚ್ಚ ಕ್ರಿಯೇಷನ್ ಹುಟ್ಟಿಕೊಳ್ಳುತ್ತದೆ. ಹೀಗೆ ವಿಶೇಷವಾಗಿ ರೂಪಿಸಿರುವ ಜತೆಗೆ ‘ಕಿಚ್ಚ ಅಂದ್ರೆ ಕೃಷ್ಣ ಅಲ್ವೇ’ ಎನ್ನುವ ತಮ್ಮ ಮಾತಿನೊಂದಿಗೆ ಯೂಟ್ಯೂಬ್ ಚಾನಲ್ ಅನ್ನು ಸುದೀಪ್ ಅವರಿಗೆ ಅರ್ಪಿಸಿದ್ದಾರೆ ಪ್ರಿಯಾ ಸುದೀಪ್.