ಬಾಲಿವುಡ್ ಚಿತ್ರದಲ್ಲಿ ಬಿಗ್ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಪ್ರಿಯಾ..!

First Published 12, Mar 2018, 2:26 PM IST
Priya Prakash Varrier to make her Bollywood debut
Highlights

ಇಂಟರ್ನೆಟ್ ಸೆನ್ಸೇಶನ್ ಆಗಿದ್ದ  ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಗುಡ್ ನ್ಯೂಸ್ ಒಂದನ್ನು ನೀಡುತ್ತಿದ್ದಾರೆ.

ಮುಂಬೈ : ಇಂಟರ್ನೆಟ್ ಸೆನ್ಸೇಶನ್ ಆಗಿದ್ದ  ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಗುಡ್ ನ್ಯೂಸ್ ಒಂದನ್ನು ನೀಡುತ್ತಿದ್ದಾರೆ.  ತನ್ನ ಕಣ್ ಸನ್ನೆಯಿಂದಲೇ ಪಡ್ಡೆಗಳ ಹೃದಯ ಕದ್ದಿದ್ದ ಪ್ರಿಯಾ ಇಂಟರ್’ನ್ಯಾಷನಲ್ ಕ್ರಷ್ ಆಗಿದ್ದರು. ಇದೀಗ ಪ್ರಿಯಾ ಪ್ರಕಾಶ್ ಬಗ್ಗೆ ಹೊಸ ಸುದ್ದಿಯೊಂದು ಹಬ್ಬಿದೆ.

ಪ್ರಿಯಾ ಬಗ್ಗೆ ಹರಡಿರುವ ಲೇಟೆಸ್ಟ್ ರೂಮರ್ ರೋಹಿತ್ ಶೆಟ್ಟಿ, ರಣ್ವೀರ್ ಸಿಂಗ್ ಕಾಂಬಿನೇಶನ್’ನಲ್ಲಿ ಬರುತ್ತಿರುವ ಸಿಂಬಾ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಣ್ವೀರ್ ಜೊತೆಯಾಗಿ ಪ್ರಿಯಾ ನಟಿಸುತ್ತಾರೆ ಎನ್ನಲಾಗುತ್ತಿದೆ.

ಆದರೆ ಈ ಚಿತ್ರದಲ್ಲಿ ಪ್ರಿಯಾಗೆ ಅತ್ಯಂತ ದೊಡ್ಡ ಪಾತ್ರವನ್ನು ನೀಡಲಾಗುತ್ತಿಲ್ಲ ಎಂದು ಕೂಡ ಹೇಳಲಾಗಿದೆ. ಒಂದು ಕಣ್ ಸನ್ನೆಯ ಮೂಲಕ ರಾತ್ರೋ ರಾತ್ರಿ ಇಂಟರ್ನೆಟ್ ಸೆನ್ಸೇಶನ್ ಆಗಿದ್ದ ಪ್ರಿಯಾಗೆ ಸಾಕಷ್ಟು ಆಫರ್’ಗಳು ಬರುತ್ತಿದ್ದು, ಬಾಲಿವುಡ್’ನಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ ಎನ್ನಲಾಗುತ್ತಿದೆ.

loader