ಕಣ್ಸನ್ನೇ ಹುಡುಗಿ ಪ್ರಿಯಾ ವಾರಿಯರ್ ರೊಮ್ಯಾಂಟಿಕ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಪ್ರಿಯಾ- ಸಿನಿಮಾಟೋಗ್ರಾಫರ್ ಸೀನು ಸಿದ್ಧಾರ್ಥ್‌ಗೆ ಕಿಸ್ ಕೊಡುವ ಸೀನ್ ಇದೆ. +
ಕಣ್ಸನ್ಸೆ ಮೂಲಕ ರಾತ್ರೋರಾತ್ರಿ ಸುದ್ದಿಯಾದವರು ಪ್ರಿಯಾ ವಾರಿಯರ್. 'ಓರು ಅಡಾರ್ ಲವ್' ಎಂಬ ಮಲಯಾಳಂ ಚಿತ್ರದ ಹಾಡೋಂದರಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದ ನಟಿ ಪ್ರಿಯಾ ವಾರಿಯರ್, ಭಾರತದಲ್ಲಿ ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಖ್ಯಾತ ಛಾಯಾಗ್ರಾಹಕ ಸೀನು ಸಿದ್ಧಾರ್ಥ್ ಜೊತೆಗಿನ ರೊಮ್ಯಾಂಟಿಕ್ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸಿನಿಮಾಟೋಗ್ರಾಫರ್ ಸೀನು ಸಿದ್ಧಾರ್ಥ್ ಹಾಗೂ ಪ್ರಿಯಾ ಅದರ ಚುಂಬನಕ್ಕೆ ಮುಂದಾಗುತ್ತಾರೆ. ಹತ್ತಿ ಬರುತ್ತಾರೆ. ಇನ್ನೇನು ಚುಂಬಿಸಿಯೇ ಬಿಟ್ಟರು ಎನ್ನುವಾಗ ಸೀನು ಕೈಯಲ್ಲಿದ್ದ ವಾಟರ್ ಬಾಟಲ್ ತೆಗೆದುಕೊಂಡು ನೀರು ಕುಡಿಯುತ್ತಾರೆ. ಏನೋ ಕನಸು ಕಂಡಿದ್ದ ಪ್ರಿಯಾಗೆ ಇದರಿಂದ ಭ್ರಮನಿರಸನವಾದಂತಾಗುತ್ತದೆ. ಬೇಸರವಾದ ಎಕ್ಸ್ ಪ್ರಶನ್ ಕೊಡುತ್ತಾರೆ.
ಇದು ಒರು ಅದಾರ್ ಲವ್ ಸಿನಿಮಾ ಶೂಟಿಂಗ್ ವೇಳೆಯ ವಿಡಿಯೋ ಆಗಿದೆ.
